2ಜಿ ತರಂಗಾಂತರ ಹಂಚಿಕೆ ಬಗ್ಗೆ ಮನಮೋಹನ್ ಸಿಂಗ್ ಮೌ‌ನವಾಗಿದ್ದೇಕೆ: ಎ. ರಾಜಾ ಪ್ರಶ್ನೆ

7

2ಜಿ ತರಂಗಾಂತರ ಹಂಚಿಕೆ ಬಗ್ಗೆ ಮನಮೋಹನ್ ಸಿಂಗ್ ಮೌ‌ನವಾಗಿದ್ದೇಕೆ: ಎ. ರಾಜಾ ಪ್ರಶ್ನೆ

Published:
Updated:
2ಜಿ ತರಂಗಾಂತರ ಹಂಚಿಕೆ ಬಗ್ಗೆ ಮನಮೋಹನ್ ಸಿಂಗ್ ಮೌ‌ನವಾಗಿದ್ದೇಕೆ: ಎ. ರಾಜಾ ಪ್ರಶ್ನೆ

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಪ್ರಕರಣ ಸಂಬಂಧ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಮೌನವಾಗಿರುವುದೇಕೆ ಎಂದು ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಪ್ರಶ್ನಿಸಿದ್ದಾರೆ.

2ಜಿ ಹಗರಣದಲ್ಲಿ ನಿರ್ದೋಷಿ ಎಂಬ ತೀರ್ಪು ಬಂದ ಕೆಲವೇ ದಿನಗಳಲ್ಲಿ ರಾಜಾ ಅವರು ‘2ಜಿ ಸಾಗಾ ಅನ್‌ಫೋಲ್ಡ್ಸ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ವಿಚಾರಣೆ ಎದುರಿಸುತ್ತಿದ್ದ ವೇಳೆ ಅವರು ಈ ಪುಸ್ತಕವನ್ನು ಬರೆದಿದ್ದರು.

‘ಮನಮೋಹನ್ ಸಿಂಗ್ ಅವರು ದೂರಸಂಪರ್ಕ ನೀತಿಯನ್ನು ಸಮರ್ಥಿಸಿಕೊಳ್ಳುವ ಬದಲು ಮೌನಕ್ಕೆ ಶರಣಾಗಿದ್ದೇಕೆ’ ಎಂದು ಪುಸ್ತಕದಲ್ಲಿ ರಾಜಾ ಪ್ರಶ್ನಿಸಿದ್ದಾರೆ.‌

‘2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಲೆಕ್ಕಾಚಾರದಲ್ಲಿ ಆಗಿನ ಮಹಾಲೇಖಪಾಲರಾಗಿದ್ದ ವಿನೋದ್ ರೈ ಅವರು ದುರುದ್ದೇಶಗಳೊಂದಿಗೆ ರಾಜಿ ಮಾಡಿಕೊಂಡಿದ್ದರು’ ಎಂದು ಅವರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry