ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೇಕಾಯಿ ಬೆಳೆಯುವುದು ಬಲು ಸರಳ

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ಮನೆಯಲ್ಲಿಯೇ ಪುಟ್ಟ ಕೈತೋಟ ಮಾಡಿ ಅದರಲ್ಲಿ ತರಕಾರಿ ಬೆಳೆಯುವವರು ನಗರದಲ್ಲಿ ಹೆಚ್ಚುತ್ತಿದ್ದಾರೆ. ಇದಕ್ಕೆ ಸಾವಯವ ಗೊಬ್ಬರ ಬಳಸಿ, ರಾಸಾಯನಿಕ ಮುಕ್ತವಾದ ತರಕಾರಿ ಸೇವಿಸುವುದು ಇವರ ಇರಾದೆ. ಮನೆಯಲ್ಲಿ ತರಕಾರಿ ಬೆಳೆಯುವುದು ತುಂಬಾ ಸರಳ. ಈ ಬಾರಿ ಹೀರೇಕಾಯಿ ಬೆಳೆಯುವುದು ಹೇಗೆ ಎಂಬುದನ್ನು ತಿಳಿಯೋಣ.

* ಯಾವುದೇ ತರಕಾರಿಯನ್ನು ಬೆಳೆಯುವಾಗಲೂ ಅದಕ್ಕೆ ಎಷ್ಟು ಗಾತ್ರದ ಕುಂಡದ ಅಗತ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಹೀರೇಕಾಯಿಗೆ ಅಗಲವಾದ ಕುಂಡ ತೆಗೆದುಕೊಳ್ಳುವುದು ಒಳಿತು. ಅಗಲ ಬಾಯಿಯ ಕುಂಡ ಆದರೆ ಹೆಚ್ಚು ಗಿಡಗಳನ್ನು ಬೆಳೆಯಬಹುದು.

* ನಾಗಾ, ಕೌಮುದಿ, ಬೇಬಿ ಸೇರಿದಂತೆ ಹಲವು ತಳಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ನಿಮಗೆ ಬೇಕಾದ ತಳಿಯ ಬೀಜಗಳನ್ನು ಕೊಂಡುಕೊಳ್ಳಿ.

* ಮರಳು ಮಿಶ್ರಿತ ಕೆಂಪು ಮಣ್ಣು, ಕಪ್ಪು ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಹೀರೇಕಾಯಿಗೆ ಬಿಸಿಲು ಹೆಚ್ಚು ಬೇಕು. ಹೀಗಾಗಿ ಕುಂಡದ ಮೇಲೆ ಬಿಸಿಲು ಬೀಳುವಂತೆ ಎಚ್ಚರವಹಿಸಿ.

* ಶೇ 70ರಷ್ಟು ಮಣ್ಣು, 20 ಸಗಣಿ, ಕೋಕೋಪಿಟ್ ಮಿಶ್ರಣ ಮಾಡಿ. ಇದನ್ನು ಕುಂಡದ ಮುಕ್ಕಾಲು ಭಾಗದವರೆಗೂ ಹಾಕಿ. ಇದರ ಮೇಲೆ ಬೀಜವನ್ನು ಇರಿಸಿ ಮೃದುವಾಗಿ ಬೆರಳಿನಿಂದ ಒತ್ತಿ. ನಂತರ ಇದರ ಮೇಲೆ ತೆಳುವಾಗಿ ಮಣ್ಣನ್ನು ಹಾಕಿ. ದಿನಕ್ಕೆರಡು ಬಾರಿ ಇದಕ್ಕೆ ನೀರನ್ನು ಚಿಮುಕಿಸಿ. ಒಮ್ಮೆ ಬೀಜ ಒಡೆದು ಮೊಳಕೆ ಬಂದ ನಂತರ ಮಣ್ಣಿನ ತೇವಾಂಶಕ್ಕನುಗುಣವಾಗಿ ನೀರು ಹಾಕಬೇಕು.

* ಸ್ಥಳ ಕಡಿಮೆ ಇದ್ದರೆ ಹೆಚ್ಚು ಎತ್ತರವಾಗಿ ಬೆಳೆಯದ ತಳಿಯನ್ನೇ ಆಯ್ಕೆ ಮಾಡಿಕೊಳ್ಳಿ. ಗಿಡ ಉದ್ದಕ್ಕೆ, ಬೆಳೆಯುತ್ತಿದ್ದಂತೆ ಚಿಕ್ಕ ಕಡ್ಡಿಯನ್ನು ಗಿಡದ ಪಕ್ಕದಲ್ಲಿ ಊರಿ. ಗಿಡಕ್ಕೆ ಪೆಟ್ಟಾಗದಂತೆ ದಾರದಿಂದ ಕಟ್ಟಿ ಇಡಿ.

* ಗಿಡ ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ಎರಡು ವಾರಕ್ಕೊಮ್ಮೆ ದ್ರವರೂಪದ ಸಾವಯವ ಗೊಬ್ಬರ ಚಿಮುಕಿಸುತ್ತಿರಿ. ಇದರಿಂದ ಹೀರೇಕಾಯಿ ಸೊಗಸಾಗಿ ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT