ರಂಗಾರ್ಪಣಂ ನೃತ್ಯ ಪ್ರದರ್ಶನ

7

ರಂಗಾರ್ಪಣಂ ನೃತ್ಯ ಪ್ರದರ್ಶನ

Published:
Updated:
ರಂಗಾರ್ಪಣಂ ನೃತ್ಯ ಪ್ರದರ್ಶನ

ಅದಿತಿ ಅಶೋಕ್‌ ಮತ್ತು ಸ್ಫೂರ್ತಿ ಅಶೋಕ್‌ ಅವರ ರಂಗಾರ್ಪಣಂ ನೃತ್ಯ ಪ್ರದರ್ಶನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ದಯಾನಂದ ಸಾಗರ್‌ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಇವರು ನಾಟ್ಯಾಂಜಲಿ ನೃತ್ಯ ಶಾಲೆಯ ಸಂಸ್ಥಾಪಕ ಅಶೋಕ್‌ ಕುಮಾರ್‌ ಅವರ ಪುತ್ರಿಯರು. ಆರಭಿ ರಾಗದ ಗಣೇಶ ಸ್ಥುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಶ್ರೀವತ್ಸವ ಗಾಯನ, ಗುರುಮೂರ್ತಿ ಮೃದಂಗ, ಪ್ರದೇಶಾಚಾರ್‌ ಪಿಟೀಲು, ಕಾರ್ತಿಕ್‌ ಸಾತವಳ್ಳಿ ಕೊಳಲು, ಪ್ರಸನ್ನ ಖಂಜಿರ, ಸುಮಾರಾಣಿ ಸಿತಾರ್‌ ವಾದನ ಮಾಡಿದರು.

ಧರ್ಮಸ್ಥಳದ ಸುರೇಂದ್ರ ಕುಮಾರ್‌, ನಿತಾ ಸುರೇಂದ್ರಕುಮಾರ್‌, ಜೈನ್‌ ವಿದ್ಯಾಸಂಸ್ಥೆಯ ಚೆನ್‌ ರಾಜ್‌, ನಿರುಪಮ ರಾಜೇಂದ್ರ, ಮೈಸೂರು ವಿ. ಸುಬ್ರಹ್ಮಣ್ಯ, ಹೇಮಾ ನಾರಾಯಣ್‌ ಇದ್ದರು.

*

ವಿದ್ಯಾರ್ಥಿಗಳಿಂದ ಜನಪದಗೀತೆ

ಪಂಚಾಮೃತ ಸುಗಮಸಂಗೀತ ಅಕಾಡೆಮಿಯ ಆಶ್ರಯದಲ್ಲಿ ಮಲ್ಲೇಶ್ವರದ ಸೇವಾಸದನದಲ್ಲಿ 'ಜನಪದ ಸಂಪದ' ಕಾರ್ಯಕ್ರಮ ನಡೆಯಿತು. ಪಂಚಾಮೃತ ವಿದ್ಯಾರ್ಥಿಗಳು ಮತ್ತು ‘ಅನಿಕಾ’ ಸಾಂಸ್ಕೃತಿಕ ಟ್ರಸ್ಟ್‌ ವಿದ್ಯಾರ್ಥಿಗಳು ಜನಪದಗೀತೆಗಳನ್ನು ಸಾಮೂಹಿಕವಾಗಿ ಹಾಡಿದರು.

ಗಾಯಕಿ ವಿನೂತ ಬೂದಿಹಾಳ್‍ರವರನ್ನು ಸನ್ಮಾನಿಸಲಾಯಿತು. ಗಾಯಕ ಶಶಿಧರ್ ಕೋಟೆ ಕಾರ್ಯಕ್ರಮ ಉದ್ಘಾಟಿಸಿದರು. ದಿನೇಶ್ ರಾವ್ ಎಂ., ಎಚ್.ಫಲ್ಗುಣ, ಮೈಸೂರು ವಿ.ಸುಬ್ರಹ್ಮಣ್ಯ, ದಿವಾಕರ್ ಕಶ್ಯಪ್‍ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry