ದೀಪಿಕಾ– ಪ್ರಭಾಸ್ ಜೋಡಿ

7

ದೀಪಿಕಾ– ಪ್ರಭಾಸ್ ಜೋಡಿ

Published:
Updated:
ದೀಪಿಕಾ– ಪ್ರಭಾಸ್ ಜೋಡಿ

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ, ‘ಬಾಹುಬಲಿ’ ಖ್ಯಾತಿಯ ಪ್ರಭಾಸ್‌ ಜೊತೆಯಾದರೆ ಹೇಗಿರುತ್ತದೆ? ಇವರನ್ನು ಕಣ್ತುಂಬಿಕೊಳ್ಳುವ ಅವಕಾಶ ಸದ್ಯದಲ್ಲಿಯೇ ಅಭಿಮಾನಿಗಳಿಗೆ ದೊರಕಲಿದೆ ಎಂಬ ಸುದ್ದಿ ಬಾಲಿವುಡ್‌ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಈ ಕುರಿತು ಅಧಿಕೃತ ಮಾಹಿತಿ ಬಹಿರಂಗಗೊಂಡಿಲ್ಲ. ಹಾಗಾಗಿ ಈ ಸಿನಿಮಾದ ಬಗೆಗಿನ ಕುತೂಹಲವನ್ನು ಅಭಿಮಾನಿಗಳು ಉಳಿಸಿಕೊಳ್ಳಬೇಕಾಗಿದೆ. ಇನ್ನು ಮಾತುಕತೆಯ ಹಂತದಲ್ಲಿರುವುದರಿಂದ ದೀಪಿಕಾ ಒಪ್ಪದಿದ್ದರೆ, ಆಲಿಯಾ, ಕತ್ರಿನಾ ಕೈಫ್‌ ಈ ಅವಕಾಶಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ. 

ಇತ್ತೀಚೆಗೆ ಪ್ರಭಾಸ್‌ ನೀಡಿದ ಸಂದರ್ಶನಲ್ಲಿ ‘ನನಗೆ ಬಾಲಿವುಡ್‌ನಲ್ಲಿ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿವೆ. ಮೂರು ವರ್ಷಗಳ ಹಿಂದೆಯೇ ಒಂದು ಸಿನಿಮಾ ಒಪ್ಪಿಗೆ ಆಗಿತ್ತು. ‘ಸಾಹೊ’ ನಂತರ ಅದರಲ್ಲಿ ತೊಡಗಿಸಿಕೊಳ್ಳುವೆ’ ಎಂದಿದ್ದರು.  ಸದ್ಯ ‘ಸಾಹೊ’ ಚಿತ್ರದಲ್ಲಿ ಪ್ರಭಾಸ್‌ ಬ್ಯುಸಿಯಾಗಿದ್ದರೆ. ದೀಪಿಕಾ ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ಕಾತರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry