ನಾಚಿಕೆ ಇಲ್ಲವೇ?

7

ನಾಚಿಕೆ ಇಲ್ಲವೇ?

Published:
Updated:

ನಾವು ಸುಮಾರು 7–8 ಜನ ಸ್ನೇಹಿತರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅರೆಕಾಲಿಕ, ಗುತ್ತಿಗೆ ಆಧಾರದ ಕೆಲಸಗಳಲ್ಲಿದ್ದೇವೆ. ನಾವೆಲ್ಲರೂ ಮಧ್ಯಮ ವರ್ಗದಿಂದ ಬಂದವರು.

ಪದವಿ ಪಡೆದು, ದೂರ ಶಿಕ್ಷಣದ ಮೂಲಕ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವವರು. ನಮ್ಮನ್ನು ದುಡಿಸಿಕೊಳ್ಳುವ ಸರ್ಕಾರ, ಸಕಾಲದಲ್ಲಿ ವೇತನ ಪಾವತಿ ಮಾಡುವುದಿಲ್ಲ, ನಮ್ಮ ಉದ್ಯೋಗಕ್ಕೆ ಭದ್ರತೆಯೂ ಇಲ್ಲ, ಕೆಲಸದ ಒತ್ತಡವಂತೂ ಬೇರೆಯದೇ ಮಾತು. ಸರ್ಕಾರದಿಂದ ಅನುಭವ ಪತ್ರವೂ ಇಲ್ಲ. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲದ್ದರಿಂದ ದುಡಿಯುವುದು ಅನಿವಾರ್ಯವಾಗಿದೆ.

ಇಷ್ಟೆಲ್ಲ ಅನಿಶ್ಚಿತತೆ, ಆತಂಕಗಳ ನಡುವೆ ಕೆಲಸ ಮಾಡುತ್ತಿರುವ ನಮಗೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷಗಳ ನಾಟಕ ಅಸಹ್ಯ ತರುತ್ತಿದೆ. ರಾಜಕಾರಣಿಗಳೇ, ನಿಮಗೆ ನಾಚಿಕೆ ಆಗುತ್ತಿಲ್ಲವೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry