‘ದೇವರ ಕೈಯಲ್ಲಿದೆ ಆಯುಧ, ಆತ ಕೈಕಟ್ಟಿ ಕುಳಿತಿಲ್ಲ’

7
ವಜ್ರದೇಹಿ ಮಠದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿಕೆ

‘ದೇವರ ಕೈಯಲ್ಲಿದೆ ಆಯುಧ, ಆತ ಕೈಕಟ್ಟಿ ಕುಳಿತಿಲ್ಲ’

Published:
Updated:
‘ದೇವರ ಕೈಯಲ್ಲಿದೆ ಆಯುಧ, ಆತ ಕೈಕಟ್ಟಿ ಕುಳಿತಿಲ್ಲ’

ಬಜ್ಪೆ: ‘ಭಾರತೀಯರಾದ ನಾವು ಶಕ್ತಿಯ ಆರಾಧಕರು. ನಾವು ಪೂಜೆ ಮಾಡುವಂತಹ ಯಾವುದೇ ದೇವರು ಕೈಕಟ್ಟಿಕೊಂಡು ಕುಳಿತುಕೊಂಡಿಲ್ಲ. ದೇವರ ಎರಡೂ ಕೈಯ್ಯಲ್ಲಷ್ಟೇ ಅಲ್ಲ, ಹತ್ತಾರು ಕೈಗಳಲ್ಲೂ ಶಸ್ತ್ರಗಳಿವೆ. ಅದುವೇ ನಮ್ಮ ಧರ್ಮವಾಗಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದರು.

ಗುರುಪುರದ ವಜ್ರದೇಹಿ ಮಠದಲ್ಲಿ ಗುರುವಾರ ರಾಜಶೇಖರಾನಂದ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

‘ಶಕ್ತಿಯ ಆರಾಧನೆ ನಮ್ಮ ಧರ್ಮ. ಇವತ್ತಿನ ಅಗತ್ಯಕ್ಕೆ ತಕ್ಕಂತೆ ಹೆಜ್ಜೆಯನ್ನು ಇಡಬೇಕಾದ ಅನಿವಾರ್ಯ ಇದೆ. ಸವಾಲುಗಳು ಸಾವಿರಾರು ಇವೆ. ಆ ಸವಾಲುಗಳನ್ನು ಎದುರಿಸಿ ನಿಲ್ಲಬೇಕು, ಶಕ್ತಿ ಪೂಜೆ ಹೇಗೆ ನಡೆಯುತ್ತದೋ ಹಾಗೆ ನಡೆಯಬೇಕು. ಹೆಚ್ಚಿನ ವಿವರಣೆ ಅಗತ್ಯ ಇಲ್ಲ ಎಂದು ಭಾವಿಸಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry