ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಮೋಹನ್ ಮೌನವೇಕೆ?’

2ಜಿ ಪ್ರಕರಣದ ಸಂಬಂಧ ಮಾಜಿ ಸಚಿವ ಎ.ರಾಜಾ ಪ್ರಶ್ನೆ
Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: 2ಜಿ ಪ್ರಕರಣದ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೌನವನ್ನು, ಆಗ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ಪ್ರಶ್ನಿಸಿದ್ದಾರೆ.

2ಜಿ ಹಗರಣದಲ್ಲಿ ತಾವು ನಿರ್ದೋಷಿ ಎಂದು ಆದೇಶ ಬಂದ ಕೆಲವೇ ದಿನಗಳಲ್ಲಿ ರಾಜಾ ತಮ್ಮ ‘2ಜಿ ಸಾಗಾ ಅನ್‌ಫೋಲ್ಡ್ಸ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

‘ಮನಮೋಹನ್ ಸಿಂಗ್ ಅವರು ದೂರಸಂಪರ್ಕ ನೀತಿಯನ್ನು ಸಮರ್ಥಿಸಿಕೊಳ್ಳುವ ಬದಲು ಮೌನಕ್ಕೆ ಶರಣಾಗಿದ್ದೇಕೆ’ ಎಂದು ಅವರು ಪ್ರಶ್ನಿಸಿದ್ದಾರೆ.‌

‘2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಲೆಕ್ಕ ಪರೀಶೀಲನೆಯಲ್ಲಿ, ಆಗಿನ ಮಹಾಲೇಖಪಾಲರಾಗಿದ್ದ ವಿನೋದ್ ರಾಯ್‌ ಅವರು ದುರುದ್ದೇಶಗಳೊಂದಿಗೆ ತೀವ್ರವಾಗಿ ರಾಜಿ ಮಾಡಿಕೊಂಡಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

‘ತರಂಗಾಂತರ ಹಂಚಿಕೆಗೂ ಮುನ್ನ ಸಿಂಗ್ ಅವರಿಗೆ ಸಂಪೂರ್ಣವಾಗಿ ತಿಳಿಸಿಯೇ ಮುಂದುವರಿದಿದ್ದೆ. ಹಾಗಿದ್ದೂ ನನ್ನ ಕ್ರಮದ ಬಗ್ಗೆ ಸಿಂಗ್ ಮತ್ತು ಯುಪಿಎ ಸರ್ಕಾರ ಮೌನ ವಹಿಸಿದ್ದು ಇಡೀ ದೇಶದ ಸಾಮೂಹಿಕ ಆತ್ಮಸಾಕ್ಷಿಯನ್ನೇ ಹತ್ತಿಕ್ಕಿದಂತೆ’ ಎಂದು ಅವರು ಬರೆದಿದ್ದಾರೆ.

‘ದೂರಸಂಪರ್ಕ ಸಚಿವಾಲಯ ಹಾಗೂ ಕೆಲವು ದೂರಸಂಪ‍ರ್ಕ ಸೇವಾ ಕಂಪನಿಗಳ ಕಚೇರಿಗಳಲ್ಲಿ ಸಿಬಿಐ ಶೋಧ ನಡೆಸಿದ (2009 ಅಕ್ಟೋಬರ್ 22) ಕುರಿತು ತಿಳಿಸಿದಾಗ ಪ್ರಧಾನಿಯೇ ಅಚ್ಚರಿಗೊಳಗಾಗಿದ್ದರು’ ಎಂಬುದು ‘2ಜಿ ಸಾಗಾ ಅನ್‌ಫೋಲ್ಡ್ಸ್‌’ನಲ್ಲಿನ ಅಂಶ.‌

‘ಯುಪಿಎ–2 ಸರ್ಕಾರವನ್ನು ಮುಗಿಸಲು ವಿನೋದ್ ರಾಯ್‌ ಅವರ ಹೆಗಲಮೇಲೆ ಬಂದೂಕು ಇಟ್ಟು ನಡೆಸಿದ ರಾಜಕೀಯ ಪಿತೂರಿ ಇದು’ ಎಂದು ಪ್ರಕರಣವನ್ನು ಅವರು ಬಣ್ಣಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿ ರಾಜಾ ಹಾಗೂ ಇತರ ಎಲ್ಲ ಆರೋಪಿಗಳನ್ನು ನಿರ್ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ತಿಂಗಳಷ್ಟೇ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT