ಇರಿತ ಪ್ರಕರಣ: ಪ್ರಾಂಶುಪಾಲ ಸೆರೆ

7

ಇರಿತ ಪ್ರಕರಣ: ಪ್ರಾಂಶುಪಾಲ ಸೆರೆ

Published:
Updated:
ಇರಿತ ಪ್ರಕರಣ: ಪ್ರಾಂಶುಪಾಲ ಸೆರೆ

ಲಖನೌ: ಇಲ್ಲಿನ ಶಾಲೆಯೊಂದರಲ್ಲಿ ಒಂದನೇ ತರಗತಿ ಬಾಲಕನ ಮೇಲೆ ಬಾಲಕಿಯೊಬ್ಬಳು ಹರಿತವಾದ ಆಯುಧದಿಂದ ಇರಿದ ಘಟನೆ ಸಂಬಂಧ, ಶಾಲೆಯ ಪ್ರಾಂಶುಪಾಲರನ್ನು ಗುರುವಾರ ಬಂಧಿಸಲಾಗಿದೆ.

ಸಹಪಾಠಿ ಮೃತಪಟ್ಟರೆ ಶಾಲೆಗೆ ರಜೆ ಸಿಗುತ್ತದೆ ಎಂದು ಬಾಲಕಿ ತಿಳಿದುಕೊಂಡಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಾಳು ಬಾಲಕ ಅಪಾಯದಿಂದ ಪಾರಾಗಿದ್ದಾನೆ.

ತ್ರಿವೇಣಿ ನಗರದ ಬ್ರೈಟ್‌ಲ್ಯಾಂಡ್‌ ಶಾಲೆಯ ಶೌಚಾಲಯದಲ್ಲಿ ಇದೇ 16ರಂದು ರಿತಿಕ್‌ ಎಂಬ ಆರು ವರ್ಷದ ಬಾಲಕನ ಮೇಲೆ ಇದೇ ಶಾಲೆಯ 11 ವರ್ಷದ ಬಾಲಕಿ ಚಾಕುವಿನಿಂದ ಇರಿದಿದ್ದಳು.

ಗುರುಗ್ರಾಮದ ಶಾಲೆಯೊಂದರ ಶೌಚಾಲಯದಲ್ಲಿ ಎರಡನೇ ತರಗತಿಯ ಬಾಲಕ ಪ್ರದ್ಯುಮ್ನ ಠಾಕೂರ್‌ನ ಶವ ಪತ್ತೆಯಾದ ಘಟನೆ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಈ ಪ್ರಕರಣ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry