ಪ್ರಯಾಣಿಕ ವಾಹನಗಳಲ್ಲಿ ಏಪ್ರಿಲ್‌ 1ರಿಂದ ಜಿಪಿಎಸ್‌ ಕಡ್ಡಾಯ

7

ಪ್ರಯಾಣಿಕ ವಾಹನಗಳಲ್ಲಿ ಏಪ್ರಿಲ್‌ 1ರಿಂದ ಜಿಪಿಎಸ್‌ ಕಡ್ಡಾಯ

Published:
Updated:

ನವದೆಹಲಿ: ಟ್ಯಾಕ್ಸಿ, ಬಸ್‌ಗಳು ಸೇರಿದಂತೆ ಎಲ್ಲ ಪ್ರಯಾಣಿಕ ವಾಹನಗಳಲ್ಲಿ ಏಪ್ರಿಲ್‌ 1ರಿಂದ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್ ಸಿಸ್ಟಮ್‌) ಸಾಧನ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಈ ಸಂಬಂಧ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ಟ್ವೀಟ್‌ ಮಾಡಿದೆ.

ತ್ರಿಚಕ್ರ ಮತ್ತು ಇ–ರಿಕ್ಷಾಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಯಾಣಿಕ ವಾಹನಗಳಿಗೆ ಜಿಪಿಎಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡುವಂತೆ ಎಲ್ಲ ರಾಜ್ಯಗಳಿಗೆ ಸಾರಿಗೆ ಸಚಿವಾಲಯ ನಿರ್ದೇಶಿಸಿತ್ತು. ಆದರೆ, ಹೆಚ್ಚಿನ ರಾಜ್ಯಗಳು ಇದನ್ನು ಪಾಲಿಸಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry