5ನೇ ಸಾಹಿತ್ಯ ಸಮ್ಮೇಳನ ನಾಳೆ

7

5ನೇ ಸಾಹಿತ್ಯ ಸಮ್ಮೇಳನ ನಾಳೆ

Published:
Updated:

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಿನಿಮಾ ನಿರ್ದೇಶಕ ಎಸ್‌.ಕೆ.ಭಗವಾನ್‌ ಅಧ್ಯಕ್ಷತೆಯಲ್ಲಿ ಇದೇ 20ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು.

‘ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ನಡೆಯಲಿದೆ. ಸಮ್ಮೇಳನಾಧ್ಯಕ್ಷರನ್ನು ಬೆಳಿಗ್ಗೆ 8.30ಕ್ಕೆ ಬಸವೇಶ್ವರನಗರದ ಶಾರದಾ ಕಾಲೊನಿ ಬಸ್‌ನಿಲ್ದಾಣದಿಂದ ಶಿವನಗರ ವೃತ್ತದ ಡಾ.ಭೀಮ್‌ರಾವ್‌ ಪ್ಯಾಲೇಸ್‌ವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಪ್ರೊ.ಬಸವಾರಾಧ್ಯ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರೊ.ಚಂದ್ರಶೇಖರ ಪಾಟೀಲ ಸಮ್ಮೇಳನ ಉದ್ಘಾಟಿಸುವರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡ ಚಳವಳಿಯ ಸವಾಲುಗಳು, ರಾಜಾಜಿನಗರದಲ್ಲಿ ಕನ್ನಡ ಚಳವಳಿ ಬೆಳೆದು ಬಂದ ದಾರಿ ಮುಂತಾದ ವಿಷಯಗಳ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತಿ ಡಾ.ಎಲ್‌.ಹನುಮಂತಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲೂ (dristilive.com) ವೀಕ್ಷಿಸಬಹುದು ಎಂದರು. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry