ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು, ನಾಳೆ ಕ್ಲಿನಿಕಲ್‌ ಸಂಶೋಧನೆ ಸಮ್ಮೇಳನ

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ಸೊಸೈಟಿ ಫಾರ್‌ ಕ್ಲಿನಿಕಲ್‌ ರಿಸರ್ಚ್‌ನ (ಐಎಸ್‌ಸಿಆರ್‌)  11ನೇ ವಾರ್ಷಿಕ ಸಮ್ಮೇಳನ ಇದೇ 19 ಮತ್ತು 20ರಂದು ನಗರದಲ್ಲಿ ನಡೆಯಲಿದೆ.

ಐಎಸ್‍ಸಿಆರ್‍ ಅಧ್ಯಕ್ಷ ಡಾ.ಚಿರಾಗ್ ತ್ರಿವೇದಿ, ‘ಹೋಟೆಲ್‌ ಜೆ.ಡಬ್ಲ್ಯು.ಮ್ಯಾರಿಯೇಟ್‌ನಲ್ಲಿ 19ರಂದು ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಆರಂಭವಾಗಲಿದೆ.  ಔಷಧಿಗಳ ಕುರಿತು ಜಾಗೃತಿ, ಕ್ಲಿನಿಕಲ್‌ ಟ್ರಯಲ್‌ಗಳಲ್ಲಿ ಅಪಾಯ ನಿರ್ವಹಣೆ, ಕ್ಲಿನಿಕಲ್ ಸಂಶೋಧನೆ ಕುರಿತು ಕಾರ್ಯಾಗಾರಗಳು ನಡೆಯಲಿವೆ. ದೇಶ, ವಿದೇಶಗಳ 800ಕ್ಕೂ ಅಧಿಕ ವೃತ್ತಿಪರರು ಭಾಗವಹಿಸಲಿದ್ದಾರೆ’ ಎಂದರು.

ಜಗತ್ತಿನ ಕ್ಲಿನಿಕಲ್ ಸಂಶೋಧನೆಗಳಲ್ಲಿ ಶೇ 1.4ರಷ್ಟು ನಮ್ಮ ದೇಶದಲ್ಲಿ ನಡೆಯುತ್ತಿವೆ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು, ಜಾಗತಿಕ ಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆ ನಡೆಯಬೇಕಿದೆ. ಈ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಎಂದರು.

ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜಿನ ಡಾ.ಡೆನ್ನಿಸ್ ಕ್ಸೇವಿಯರ್‌, ‘ಜನರಿಗೆ ಸುಲಭವಾಗಿ ದೊರೆಯುವ ಚಿಕಿತ್ಸೆ ಕುರಿತ ಸಂಶೋಧನೆಗೆ ಆದ್ಯತೆ ನೀಡಬೇಕು’ ಎಂದರು.

2 ಲಕ್ಷ ಮಂದಿ ನೋಂದಣಿ

‘ಮುಂದಿನ 5 ವರ್ಷಗಳಲ್ಲಿ ಜಾಗತಿಕ ಕ್ಲಿನಿಕಲ್ ಟ್ರಯಲ್ ಪ್ರಮಾಣದಲ್ಲಿ ಶೇ 5-10ರಷ್ಟನ್ನು ಭಾರತ ಸೆಳೆದುಕೊಳ್ಳಬಹುದು. ಪ್ರಯೋಗಕ್ಕೆ ಒಳಗಾಗಲು ಜನರೂ ಮುಂದೆ ಬರುತ್ತಿದ್ದಾರೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ) ಪ್ರಕಾರ ಇದುವರೆಗೂ ಸುಮಾರು 2 ಲಕ್ಷ ಜನರು ಔಷಧೀಯ ಪ್ರಯೋಗಗಳಿಗೆ ಒಳಗಾಗಲು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಚಿರಾಗ್ ಮಾಹಿತಿ ನೀಡಿದರು.

ಕ್ಲಿನಿಕಲ್‌ ಸಂಶೋಧನೆಗೆ ನೋಂದಣಿ

ವರ್ಷ,  ಕಂಪನಿಗಳು

2014 , 17

2015 , 57

2016 , 37

2017 , 164

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT