ಕೆ.ಎಚ್‌.ಎನ್‌.ಸಿಂಹ ನಿಧನ

7

ಕೆ.ಎಚ್‌.ಎನ್‌.ಸಿಂಹ ನಿಧನ

Published:
Updated:
ಕೆ.ಎಚ್‌.ಎನ್‌.ಸಿಂಹ ನಿಧನ

ಬೆಂಗಳೂರು: ಮಾಜಿ ಮೇಯರ್‌ ಕೆ.ಎಚ್.ಎನ್.ಸಿಂಹ (79) ಗುರುವಾರ ಬೆಳಿಗ್ಗೆ 8.30ಕ್ಕೆ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ ಸರೋಜಾದೇವಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಚಾಮರಾಜಪೇಟೆಯಲ್ಲಿರುವ ಟಿ.ಆರ್‌.ಮಿಲ್‌ ಚಿತಾಗಾರದಲ್ಲಿ ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ.

1998-99ನೇ ಸಾಲಿನಲ್ಲಿ ಮೇಯರ್‌ ಅವರು ಆಗಿದ್ದರು. ಮೈಸೂರು ರಸ್ತೆಯ ಶಿರಸಿ ವೃತ್ತದಿಂದ ಪುರಭವನದವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಅವರ ಅವಧಿಯಲ್ಲೇ ಆರಂಭಿಸಲಾಗಿತ್ತು. ಪೌರಕಾರ್ಮಿಕರಿಗೂ ಬಡ್ತಿ ಸೌಲಭ್ಯ ಕಲ್ಪಿಸಿದ್ದರು.

ಅವರ ಗೌರವಾರ್ಥ ಪಾಲಿಕೆ ಕಚೇರಿಗಳಿಗೆ (ತುರ್ತು ಸೇವೆ ಹೊರತುಪಡಿಸಿ) ರಜೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry