ಕಾಫಿ ಬೆಳೆಗಾರರ ಆದಾಯ 3 ಪಟ್ಟು ಹೆಚ್ಚಿಸಲು ಕ್ರಮ

7

ಕಾಫಿ ಬೆಳೆಗಾರರ ಆದಾಯ 3 ಪಟ್ಟು ಹೆಚ್ಚಿಸಲು ಕ್ರಮ

Published:
Updated:
ಕಾಫಿ ಬೆಳೆಗಾರರ ಆದಾಯ 3 ಪಟ್ಟು ಹೆಚ್ಚಿಸಲು ಕ್ರಮ

ಬೆಂಗಳೂರು: ‘ವಿದೇಶದಲ್ಲಿ ನಮ್ಮ ದೇಶದ ಒಂದು ಕಪ್‌ ಕಾಫಿ ಬೆಲೆ ₹ 320 ಇದೆ. ಆದರೆ, ಇಲ್ಲಿ ಕಾಫಿ ಬೆಳೆಗಾರನಿಗೆ ಸಿಗುವ ದರ ಕೇವಲ ₹ 3’ ಎಂದು ಕಾಫಿ ಮಂಡಳಿ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಹೇಳಿದ್ದಾರೆ.

ಭಾರತ ಅಂತರರಾಷ್ಟ್ರೀಯ ಕಾಫಿ ಉತ್ಸವ–2018 ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಕಾಫಿ ಬೆಳೆಗಾರರ ಆದಾಯ 3 ಪಟ್ಟು ಹೆಚ್ಚಿಸಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಕಾಫಿಗೆ ಉತ್ತಮ ಬ್ರ್ಯಾಂಡ್‌ ದೊರಕಿಸಲು ಪ್ರಯತ್ನ ನಡೆಸಿದ್ದೇವೆ’ ಎಂದರು.

‘ಬಿಳಿಗಿರಿ ರಂಗನಬೆಟ್ಟದಲ್ಲಿ ಸೋಲಿಗರು ಬೆಳೆಯುವ ಕಾಫಿಗೆ ಮಾರುಕಟ್ಟೆ ಒದಗಿಸಲು ಕ್ರಮ ತೆಗೆದುಕೊಳ್ಳ ಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ  ಬೈರೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry