ಇಂಡಿಯನ್ ಆಯಿಲ್‌ ಒಪ್ಪಂದ

7

ಇಂಡಿಯನ್ ಆಯಿಲ್‌ ಒಪ್ಪಂದ

Published:
Updated:
ಇಂಡಿಯನ್ ಆಯಿಲ್‌ ಒಪ್ಪಂದ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಇಸ್ರೇಲ್‌ನ ಎರಡು ಸಂಸ್ಥೆಗಳ ಒಪ್ಪಂದ ಮಾಡಿಕೊಂಡಿದೆ.

ಸ್ಟಾರ್ಟ್‌ಅಪ್‌ ಕಂಪನಿ ಫಿನರ್ಜಿ ಮತ್ತು ತಂತ್ರಜ್ಞಾನ ಸಂಸ್ಥೆ ಏಡಾ (ವೈಇಡಿಎ) ಜತೆ ಮಂಗಳವಾರ ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಫಿನರ್ಜಿ ಜತೆಗಿನ ಒಪ್ಪಂದದ ಫಲವಾಗಿ, ‘ಐಒಸಿ’ಯು ದೇಶಿ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಇಂಧನ ಮಾರಾಟ ವ್ಯವಸ್ಥೆ ಅಳವಡಿಸಿಕೊಳ್ಳಲು ನೆರವಾಗಲಿದೆ. ‘ಏಡಾ’ ಸಂಸ್ಥೆ ಜತೆಗಿನ ಸಹಯೋಗವು ಸೌರಶಕ್ತಿ ಮತ್ತು ಪರಿಸರ ಸ್ನೇಹಿ ಇಂಧನ ತಂತ್ರಜ್ಞಾನದ ಸಂಶೋಧನಾ ಕ್ಷೇತ್ರದಲ್ಲಿ ಸಹಕಾರಕ್ಕೆ ನೆರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry