ನ್ಯೂಜೆರ್ಸಿ: ಅಟಾರ್ನಿ ಜನರಲ್‌ ಆಗಿ ಗ್ರೇವಾಲ್ ನೇಮಕ

7

ನ್ಯೂಜೆರ್ಸಿ: ಅಟಾರ್ನಿ ಜನರಲ್‌ ಆಗಿ ಗ್ರೇವಾಲ್ ನೇಮಕ

Published:
Updated:
ನ್ಯೂಜೆರ್ಸಿ: ಅಟಾರ್ನಿ ಜನರಲ್‌ ಆಗಿ ಗ್ರೇವಾಲ್ ನೇಮಕ

ನ್ಯೂಯಾರ್ಕ್‌: ಅಮೆರಿಕದ ನ್ಯೂಜೆರ್ಸಿ ರಾಜ್ಯದ ಅಟಾರ್ನಿ ಜನರಲ್ ಆಗಿ ಸಿಖ್ ಸಮುದಾಯಕ್ಕೆ ಸೇರಿದ ಭಾರತ ಮೂಲದ ಅಮೆರಿಕದ ವಕೀಲ ಗುರ್‌ಬೀರ್‌ ಎಸ್.ಗ್ರೇವಾಲ್‌ ನೇಮಕವಾಗಿದ್ದಾರೆ.

ಇವರ ಆಯ್ಕೆಯನ್ನು ನ್ಯೂಜೆರ್ಸಿ ಸೆನೆಟ್‌ ಒಮ್ಮತದಿಂದ ಅನುಮೋದಿಸಿದೆ.

‘ಇದನ್ನು ನಾನು ಎಂದೂ ನಿರೀಕ್ಷಿಸಿರಲಿಲ್ಲ. ನನ್ನ ಜೀವನದ ಪ್ರಯಾಣ ನನ್ನನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ’ ಎಂದು ಗ್ರೇವಾಲ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಗ್ರೇವಾಲ್‌ ಅವರ ಹೆಸರನ್ನು ಅಟಾರ್ನಿ ಜನರಲ್ ಹುದ್ದೆಗೆ ಸೂಚಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry