ಹುಣಸೂರು ನಗರಸಭೆ: ಕಾಂಗ್ರೆಸ್‌ಗೆ ಮುಖಭಂಗ

7

ಹುಣಸೂರು ನಗರಸಭೆ: ಕಾಂಗ್ರೆಸ್‌ಗೆ ಮುಖಭಂಗ

Published:
Updated:

ಮೈಸೂರು: ಹುಣಸೂರು ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಗುರುವಾರ ಕಾಂಗ್ರೆಸ್ ಮುಖಭಂಗಕ್ಕೆ ಒಳಗಾಗಿದೆ.

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಕುಮಾರ್ ಅವರು ಕೆಲವು ಕಾಂಗ್ರೆಸ್ ಸದಸ್ಯರು, ಜೆಡಿಎಸ್, ಪಕ್ಷೇತರರು ಹಾಗೂ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣೆಯಲ್ಲಿ ಕಾಂಗ್ರೆಸ್‌ನ 6 ಸದಸ್ಯರು, ಜೆಡಿಎಸ್‌ನ 5, ಇಬ್ಬರು ಪಕ್ಷೇತರರು ಹಾಗೂ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಒಟ್ಟು 15 ಮಂದಿ ಶಿವಕುಮಾರ್‌ ಪರ ಮತ ಚಲಾಯಿಸಿದರು. ಕಾಂಗ್ರೆಸ್ ಬಹುಮತ ಹೊಂದಿದ್ದು, ಕ್ಷೇತ್ರದಲ್ಲಿ ಶಾಸಕರು ಇದ್ದರೂ ಅಧಿಕಾರ ಕಳೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry