ತ್ರಿಕೋನ ಸರಣಿಯ ವೇಳಾಪಟ್ಟಿ ಬದಲು

7

ತ್ರಿಕೋನ ಸರಣಿಯ ವೇಳಾಪಟ್ಟಿ ಬದಲು

Published:
Updated:
ತ್ರಿಕೋನ ಸರಣಿಯ ವೇಳಾಪಟ್ಟಿ ಬದಲು

ನವದೆಹಲಿ: ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ತ್ರಿಕೋನ ಟ್ವೆಂಟಿ–20 ಸರಣಿಯ ವೇಳಾಪಟ್ಟಿ ಬದಲಿಸಲಾಗಿದೆ. ಮಾರ್ಚ್‌ 6ರಿಂದ 18ರವರೆಗೆ ಪಂದ್ಯಗಳು ನಡೆಯಲಿವೆ.

ಶ್ರೀಲಂಕಾದ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಸರಣಿಯನ್ನು ಆಯೋಜಿಸಲಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಆಡಲಿವೆ. ಮೊದಲು ಪ್ರಕಟಿಸಿದ್ದ ವೇಳಾಪಟ್ಟಿ ಪ್ರಕಾರ ಚುಟುಕು ಸರಣಿ ಮಾರ್ಚ್‌ 8ರಿಂದ 20ರವರೆಗೆ ನಡೆಯಬೇಕಿತ್ತು.

ಟೂರ್ನಿಯನ್ನು ‘ನಿದಾಸ್‌ ಟ್ರೋಫಿ‘ ಎಂದು ಹೆಸರಿಸಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ ಪ್ರತೀ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ.  ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಮಾರ್ಚ್‌ 18ರಂದು ಫೈನಲ್ ಪಂದ್ಯದಲ್ಲಿ ಆಡಲಿವೆ. ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗಿದೆ.

ಡಿಸ್ಕವರಿ ಕಮ್ಯುನಿಕೇಷನ್ಸ್ ಭಾರತದಲ್ಲಿ ಟೂರ್ನಿಯ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry