ವಜ್ರದೇಹಿ ಸ್ವಾಮೀಜಿಗೆ ಸಮನ್ಸ್

7

ವಜ್ರದೇಹಿ ಸ್ವಾಮೀಜಿಗೆ ಸಮನ್ಸ್

Published:
Updated:
ವಜ್ರದೇಹಿ ಸ್ವಾಮೀಜಿಗೆ ಸಮನ್ಸ್

ಬಜ್ಪೆ: ಮೂರು ವರ್ಷದ ಹಿಂದೆ ಉಳಾಯಿಬೆಟ್ಟಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರಿಗೆ ಮಂಗಳೂರಿನ ಜೆಎಂಎಫ್‍ಸಿ ನ್ಯಾಯಾಲಯದಿಂದ ಸಮನ್ಸ್ ಬಂದಿದೆ.

2014ರ ಡಿಸೆಂಬರ್ 5ರ ರಾತ್ರಿ ಪೆರ್ಮಂಕಿಯ ಶಿವರಾತ್ರಿಬೆಟ್ಟು ಎಂಬಲ್ಲಿ ಹಲವಾರು ಹಿಂದೂ ಯುವಕರು ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಹೊರಟು ನಿಂತಿದ್ದರು. ಈ ವೇಳೆ ಟೆಂಪೊ ಉಳಾಯಿಬೆಟ್ಟು ಕಡೆಯಿಂದ ಪರಾರಿ ಸಮೀಪಕ್ಕೆ ಬರುವಾಗ ಗುಂಪೊಂದು ವಾಹನದ ಮೇಲೆ ಕಲ್ಲೆಸೆದಿತ್ತು. ಇದಾದ ಸ್ವಲ್ಪ ಹೊತ್ತಿನ ನಂತರ ಇನ್ನಷ್ಟು ದತ್ತಮಾಲಾಧಾರಿಗಳು ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಅವರನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡ ಅವರ ಮೇಲೆ ಗಂಭೀರ ಹಲ್ಲೆ ಕೂಡಾ ನಡೆಸಿತ್ತು. ಈ ಘಟನೆಯಲ್ಲಿ ಒಟ್ಟು ಎಂಟು ಮಂದಿ ದತ್ತಮಾಲಾಧಾರಿಗಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಯನ್ನು ಖಂಡಿಸಿ ಅದೇ ಡಿಸೆಂಬರ್‌ 8ರಂದು ವಜ್ರದೇಹಿ ಸ್ವಾಮೀಜಿಗಳ ನೇತೃತ್ವದಲ್ಲಿ ಉಳಾಯಿಬೆಟ್ಟು ಸಮೀಪ ಬೃಹತ್ ಪ್ರತಿಭಟನೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry