ಹೊತ್ತಿ ಉರಿದ ಬಸ್‌: 52 ಸಾವು

7

ಹೊತ್ತಿ ಉರಿದ ಬಸ್‌: 52 ಸಾವು

Published:
Updated:
ಹೊತ್ತಿ ಉರಿದ ಬಸ್‌: 52 ಸಾವು

ಅಸ್ತಾನಾ: ರಷ್ಯಾಗೆ ತೆರಳುತ್ತಿದ್ದ ಬಸ್‌ವೊಂದು ಬೆಂಕಿಗೆ ಆಹುತಿಯಾಗಿದ್ದರಿಂದ 52 ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಜಕಿಸ್ತಾನದ ಅಕ್ತೊಬೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಐವರು ಸುರಕ್ಷಿತವಾಗಿ ಪಾರಾಗಿದ್ದಾರೆ. ಮೃತಪಟ್ಟವರೆಲ್ಲರೂ ಉಜ್ಬೆಕಿಸ್ತಾನಕ್ಕೆ ಸೇರಿದವರು. ಇವರೆಲ್ಲರೂ ವಲಸೆ ಕಾರ್ಮಿಕರಾಗಿದ್ದು, ರಷ್ಯಾಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತಕ್ಕೆ ಖಚಿತ ಕಾರಣಗಳು ತಿಳಿದು ಬಂದಿಲ್ಲ.

ಕಜಕಿಸ್ತಾನದ ಶ್ಯಾಮ್ಕೆಂಟ್‌ ನಗರದಿಂದ ಸುಮಾರು 1,900 ಕಿಲೋ ಮೀಟರ್‌ ದೂರದ ರಷ್ಯಾದ ಸಮರಾ ನಗರಕ್ಕೆ ಬಸ್‌ ತೆರಳುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry