ಗರ್ಭಿಣಿಯಾದ ಬಾಲಕಿ ಮಲತಂದೆ ಬಂಧನ

7

ಗರ್ಭಿಣಿಯಾದ ಬಾಲಕಿ ಮಲತಂದೆ ಬಂಧನ

Published:
Updated:

ಬೆಂಗಳೂರು: 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮಲತಂದೆಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಶಾಲೆಗೆ ಹೋಗಿರಲಿಲ್ಲ. ವಿಚಾರಿಸಲು ಮನೆಗೆ ಬಂದಿದ್ದ ಶಿಕ್ಷಕಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವ ವಿಚಾರ ತಿಳಿಸಿದ್ದರು.

‘ನನ್ನ ತಂದೆ ನಾಲ್ಕು ವರ್ಷಗಳ ಹಿಂದೆಯೇ ನಿಧನರಾದರು. ಎರಡು ವರ್ಷಗಳ ಹಿಂದೆ ಇನ್ನೊಬ್ಬ ವ್ಯಕ್ತಿ (ಆರೋಪಿ) ನನ್ನ ತಾಯಿಯನ್ನು ಮದುವೆ

ಯಾದರು. ಆರಂಭದಲ್ಲಿ ನನ್ನನ್ನು ಸ್ವಂತ ಮಗಳಂತೆಯೇ ನೋಡಿಕೊಳ್ಳುತ್ತಿದ್ದರು’ ಎಂದು ಬಾಲಕಿ ಹೇಳಿದ್ದಾಳೆ.

‘ತಾಯಿ ಮನೆಯಲ್ಲಿ ಇಲ್ಲದಿರುವುದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಇಂದಿನ ನನ್ನ ಸ್ಥಿತಿಗೆ ಮಲ ತಂದೆಯೇ ಕಾರಣ’ ಎಂದು ದೂರಿದ್ದಳು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಕೆಲಸದ ನಿಮಿತ್ತ ಅಸ್ಸಾಂಗೆ ಹೋಗಿದ್ದ ಆರೋಪಿ, ಬುಧವಾರ ರಾತ್ರಿ ನಗರಕ್ಕೆ ಮರಳಿದ. ಆತನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಕೊಡಿಗೇಹಳ್ಳಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry