ಸಿಯಾಟಲ್: ಶೇ 40ರಷ್ಟು ತಂತ್ರಜ್ಞರು ಭಾರತೀಯರು

7

ಸಿಯಾಟಲ್: ಶೇ 40ರಷ್ಟು ತಂತ್ರಜ್ಞರು ಭಾರತೀಯರು

Published:
Updated:

ವಾಷಿಂಗ್ಟನ್‌: ಸಿಯಾಟಲ್‌ ನಗರದಲ್ಲಿರುವ ವಿದೇಶಿ ತಂತ್ರಜ್ಞರಲ್ಲಿ ಶೇ 40ರಷ್ಟು ಮಂದಿ ಭಾರತೀಯರೇ ಇದ್ದಾರೆ ಎಂದು ‘ದಿ ಸಿಯಾಟಲ್ ಟೈಮ್ಸ್’ ವರದಿ ಮಾಡಿದೆ.

ನಂತರದ ಸ್ಥಾನದಲ್ಲಿ ಚೀನಾದ (ಶೇ 13.5ರಷ್ಟು) ತಂತ್ರಜ್ಞರಿದ್ದಾರೆ. ಸಿಯಾಟಲ್‌ನಲ್ಲಿ ಅಮೆಜಾನ್‌, ಮೈಕ್ರೊಸಾಫ್ಟ್‌ ಮತ್ತು ಬೋಯಿಂಗ್‌ ಕಂಪನಿಗಳು ಇವೆ. ಈ ನಗರದ ಐಟಿ ಕ್ಷೇತ್ರವು ಶೇ 70ರಷ್ಟು ವಿದೇಶಿ ನೌಕರರನ್ನು ಒಳಗೊಂಡಿದೆ. ಸಿಯಾಟಲ್‌ ಸಮೀಪದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಅತಿ ಹೆಚ್ಚು, ಶೇ 50ಕ್ಕೂ ಹೆಚ್ಚು ವಿದೇಶಿ ತಂತ್ರಜ್ಞರಿದ್ದಾರೆ.

ಅಮೆರಿಕದ ಇತರ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಹಬ್‌ಗಳಲ್ಲಿಯೂ ವಿದೇಶಿ ಐಟಿ ಕೆಲಸಗಾರರ ಸಂಖ್ಯೆ ಹೆಚ್ಚಿದೆ. ವಾಷಿಂಗ್ಟನ್‌–ಅರ್ಲಿಂಗ್ಟನ್‌–ಅಲೆಗ್ಸಾಂಡ್ರಿಯಾ (ಶೇ 33.8), ಡಲ್ಲಾಸ್–ಫೋರ್ತ್‌ ವರ್ತ್‌ (ಶೇ 31.4), ಬಾಸ್ಟನ್‌–ಕೇಂಬ್ರಿಡ್ಜ್ (ಶೇ 30.8), ಸ್ಯಾನ್‌ ಡಿಯಾಗೊ–ಕಾರ್ಲ್ಸ್‌ಬಡ್‌ (ಶೇ 30.5) ಮಂದಿ ವಿದೇಶಿ ತಂತ್ರಜ್ಞರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry