ಬ್ರೆಕ್ಸಿಟ್‌ ಮಸೂದೆಗೆ ಸಂಸದರ ಒಪ್ಪಿಗೆ

7

ಬ್ರೆಕ್ಸಿಟ್‌ ಮಸೂದೆಗೆ ಸಂಸದರ ಒಪ್ಪಿಗೆ

Published:
Updated:

ಲಂಡನ್‌: ಐರೋಪ್ಯ ಒಕ್ಕೂಟದಿದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್ ಮಸೂದೆಗೆ ಬ್ರಿಟನ್‌ನ ಕೆಳಮನೆಯ ಸಂಸದರು ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ.

ಮಸೂದೆ ಪರವಾಗಿ 324 ಮತ್ತು ವಿರುದ್ಧವಾಗಿ 295 ಮತಗಳು ಚಲಾವಣೆಯಾದವು. 1972ರ ಕಾನೂನಿನ ಪ್ರಕಾರ ಬ್ರಿಟನ್‌, ಐರೋಪ್ಯ ಒಕ್ಕೂಟ ಸೇರಿದ್ದು, ಈಗ ಆ ಕಾನೂನನ್ನು ರದ್ದುಪಡಿಸುವ ಮೂಲಕ ಒಕ್ಕೂಟದಿಂದ ಹೊರಗೆ ಬರಲು ಹಾದಿ ಸುಗಮವಾಗಲಿದೆ.

‘ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಅಧಿಕೃತವಾಗಿ 2019ರಲ್ಲಿ ಹೊರಬರಲಿದೆ. ಈ ಮಸೂದೆ ಅಂಗೀಕಾರವಾಗುವ ಮುನ್ನ ಸಂಸದರು, 500ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಸೂಚಿಸಿದರು. 80 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು ಚರ್ಚಿಸಿದ್ದರು’ ಎಂದು ಬ್ರೆಕ್ಸಿಟ್ ಕಾರ್ಯದರ್ಶಿ ಡೇವಿಡ್‌ ಡೇವಿಸ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry