ಇಂದಿನಿಂದ 3 ದಿನ ಬಿಲ್ಡರ್ಸ್‌ ಸಮಾವೇಶ

7

ಇಂದಿನಿಂದ 3 ದಿನ ಬಿಲ್ಡರ್ಸ್‌ ಸಮಾವೇಶ

Published:
Updated:

ಬೆಂಗಳೂರು: ನಗರದಲ್ಲಿ ಶುಕ್ರವಾರದಿಂದ ಮೂರು ದಿನಗಳವರೆಗೆ ಭಾರತೀಯ ಬಿಲ್ಡರ್ಸ್‌ ಸಂಘದ (ಬಿಎಐ) 28ನೇ ಸಮಾವೇಶ ನಡೆಯಲಿದೆ.

ದೇವನಹಳ್ಳಿ ರಸ್ತೆಯ ಬಳಿ ಇರುವ ಕ್ಲಾರ್ಕ್‌ ಎಕ್ಸಾಟಿಕಾ ಕ್ಲಾರ್ಕ್ಸ್‌ ಎಕ್ಸಾಟಿಕಾ ರೆಸಾರ್ಟ್‌ ಅಂಡ್‌ ಸ್ಪಾದಲ್ಲಿ ನಡೆಯಲಿರುವ ಸಮಾವೇಶವನ್ನು ಉಪ ರಾಷ್ಟ್ರಪತಿ ಎಂ. ವೆಕಯ್ಯ ನಾಯ್ಡು ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದಾರೆ.

ನಿರ್ಮಾಣ ವಲಯದಲ್ಲಿ ಇರುವ ಅವಕಾಶಗಳು ಮತ್ತು ಸವಾಲುಗಳ ಕುರಿತಾಗಿ ಸಮಾವೇಶದಲ್ಲಿ ಚರ್ಚೆ, ವಿಚಾರಗೋಷ್ಠಿ ನಡೆಯಲಿದೆ. ವಿವಿಧ ಕಂಪನಿಗಳು ನಿರ್ಮಾಣ ವಲಯಕ್ಕೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳು, ತಂತ್ರಜ್ಞಾನ ಮಾದರಿಗಳನ್ನು ಪ್ರದರ್ಶಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry