ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಬಲೆಗೆ ‘ಹನಿಟ್ರ್ಯಾಪ್’ ಗ್ಯಾಂಗ್

ಮೂವರು ಮಹಿಳೆಯರು ಸೇರಿ ಐವರ ಬಂಧನ
Last Updated 18 ಜನವರಿ 2018, 20:32 IST
ಅಕ್ಷರ ಗಾತ್ರ

ಬೆಂಗಳೂರು: ಮೀನು ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕಿಸಿ, ₹50 ಸಾವಿರ ಸುಲಿಗೆ ಮಾಡಲು ಯತ್ನಿಸಿದ್ದ ಮೂವರು ಮಹಿಳೆಯರು ಸೇರಿ ಐದು ಮಂದಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

‘ಕೊತ್ತನೂರಿನ ಶಾಹಿನಾ (40), ನೂರಿ ಅಲಿಯಾಸ್ ಶಮಾ (35), ಸಲ್ಮಾ ಫರ್ವೀನ್ (27), ಕಾಡುಗೊಂಡನಹಳ್ಳಿಯ ಸಜೀದ್ ಶೇಖ್ (38) ಹಾಗೂ ಸೈಯದ್ ಶರೀಫ್ (30) ಎಂಬುವರನ್ನು ಬಂಧಿಸಿದ್ದೇವೆ. ಶಿವಾಜಿನಗರದ ಸಲೀಂ ಹಾಗೂ ಆಸೀಫ್ ಅಲಿಯಾಸ್ ಮೆಂಟಲ್ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಎರಡು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಶಾಹಿನಾ ಹಾಗೂ ನೂರಿ, ‘ಹನಿಟ್ರ್ಯಾಪ್’ ಮಾಡಿದರೆ ಸುಲಭವಾಗಿ ಹಣ ಸಂಪಾದಿಸ
ಬಹುದು ಎಂದು ನಿರ್ಧರಿಸಿ ಅದಕ್ಕಾಗಿ ಏಳು ಮಂದಿಯ ತಂಡ ಕಟ್ಟಿದ್ದರು. ಕ್ರಮೇಣ ವೇಶ್ಯೆಯರ ಸಂಗ ಬಯಸಿ ತಮ್ಮ ಬಳಿ ಬರುತ್ತಿದ್ದ ಪುರುಷರನ್ನು ಬೆದರಿಸಿ ಸುಲಿಗೆ ಮಾಡಲು ಪ್ರಾರಂಭಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಈ ದಂಧೆಗಾಗಿಯೇ ಹೆಗಡೆನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಪರಿಚಿತ ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನು ಖುದ್ದು ಸಂಪರ್ಕಿಸುತ್ತಿದ್ದ ಶಾಹಿನಾ, ‘ಹೊರ ರಾಜ್ಯದ ಹುಡುಗಿ ಇದ್ದಾಳೆ. ಆಕೆ ಬೇಕೆಂದರೆ ಗಂಟೆಗೆ ₹ 5,000 ಕೊಡಬೇಕು’ ಎನ್ನುತ್ತಿದ್ದಳು. ಅದಕ್ಕೆ ಅವರು ಒಪ್ಪಿದರೆ, ಹೆಗಡೆನಗರದ ಮನೆಗೆ ಬರುವಂತೆ ಸೂಚಿಸುತ್ತಿದ್ದಳು.

ಅವರು ಬರುವ ವೇಳೆಗಾಗಲೇ ಯುವತಿಯೊಬ್ಬಳನ್ನು ಮನೆಯಲ್ಲಿ ಕೂರಿಸಿರುತ್ತಿದ್ದರು. ಆ ವ್ಯಕ್ತಿ ಬಟ್ಟೆ ಕಳಚುತ್ತಿದ್ದಂತೆಯೇ ಯುವತಿ ಚೀರಿಕೊಳ್ಳುವ ಮೂಲಕ ಗ್ಯಾಂಗ್‌ನ ಇತರೆ ಸದಸ್ಯರಿಗೆ ಸೂಚನೆ ಕೊಡುತ್ತಿದ್ದಳು.

ಕೂಡಲೇ ಒಳನುಗ್ಗುತ್ತಿದ್ದ ಸಜೀದ್, ಸೈಯದ್, ಸಲೀಂ ಹಾಗೂ ಆಸೀಫ್, ಆ ವ್ಯಕ್ತಿ ಬೆತ್ತಲಾಗಿರುವುದನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿ
ಕೊಂಡು ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಡುತ್ತಿದ್ದರು. ಕೊಡಲು ಒಪ್ಪದಿದ್ದರೆ, ಪೊಲೀಸರಿಗೆ ದೂರು ನೀಡುವುದಾಗಿ ಹಾಗೂ ವಿಡಿಯೊವನ್ನು ಪತ್ನಿ, ಮಕ್ಕಳಿಗೆ ತೋರಿಸಿ ಮಾರ್ಯಾದೆ ತೆಗೆಯುವುದಾಗಿ ಹೆದರಿಸುತ್ತಿದ್ದರು.

ರಾತ್ರಿವರೆಗೂ ಬ್ಲ್ಯಾಕ್‌ಮೇಲ್ ಮಾಡಿ ಎಷ್ಟು ಸಿಗುತ್ತದೋ ಅಷ್ಟು ಹಣ ವಸೂಲಿ ಮಾಡುತ್ತಿದ್ದರು. ಅಲ್ಲದೆ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ, ವಿಡಿಯೊವನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಕಳುಹಿಸುತ್ತಿದ್ದರು.

ದೂರು ಕೊಟ್ಟ ವ್ಯಾಪಾರಿ: ಕಾಡುಗೊಂಡನಹಳ್ಳಿಯ ಮೀನು ವ್ಯಾಪಾರಿಯೊಬ್ಬರಿಂದ ಸುಲಿಗೆ ಮಾಡಲು ಸಂಚು ರೂಪಿಸಿದ್ದ ಶಾಹಿನಾ, ಸೋಮವಾರ ಮಧ್ಯಾಹ್ನ 1 ಗಂಟೆಗೆ ಅವರಿಗೆ ಕರೆ ಮಾಡಿ ‘ಹೊಸ ಹುಡುಗಿ ಬಂದಿದ್ದಾಳೆ ಬನ್ನಿ’ ಎಂದಿದ್ದಳು.

50 ವರ್ಷದ ಆ ವ್ಯಕ್ತಿ ಕೂಡಲೇ ಮನೆಗೆ ತೆರಳಿ ಅಲ್ಲಿದ್ದ ಯುವತಿ ಜತೆ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದರು. ಇದೇ ವೇಳೆ ಗ್ಯಾಂಗ್ ಸದಸ್ಯನೊಬ್ಬ ಒಳನುಗ್ಗಿ, ‘ನನ್ನ ಹೆಂಡತಿ ಜತೆ ಮಲಗಿದ್ದೀಯಾ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಪೊಲೀಸರಿಗೆ ದೂರು ಕೊಡುತ್ತೇನೆ. ಜನರನ್ನು ಸೇರಿಸುತ್ತೇನೆ’ ಎಂದು ರಂಪಾಟ ಮಾಡಿದ್ದ.

ಇದರಿಂದ ಗಾಬರಿಗೊಂಡು ಪರಾರಿಯಾಗಲು ಯತ್ನಿಸಿದ ಆ ವ್ಯಾಪಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಆತ, ಬಳಿಕ ಅದೇ ಕೋಣೆಯಲ್ಲಿ ಒಂದೂವರೆ ತಾಸು ಕೂಡಿ ಹಾಕಿದ್ದ. ನಂತರ ಸಹಚರರೊಂದಿಗೆ ಒಳನುಗ್ಗಿ ಆ ವ್ಯಾಪಾರಿಯಿಂದ ₹5,000 ಕಿತ್ತುಕೊಂಡಿದ್ದ. ಅಲ್ಲದೆ, ಸಂಜೆ 5 ಗಂಟೆ
ಯೊಳಗೆ ₹45,000 ಕೊಡದಿದ್ದರೆ ಕುಟುಂಬ ಸದಸ್ಯರಿಗೆ ವಿಷಯ ತಿಳಿಸುವುದಾಗಿ ಬೆದರಿಸಿ ಕಳುಹಿಸಿದ್ದ. ದಿಕ್ಕುತೋಚದಂತಾದ ಆ ವ್ಯಾಪಾರಿ ಸಂಜೆ ಕೊತ್ತನೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

‘ವ್ಯಾಪಾರಿ ದೂರು ಕೊಟ್ಟ ಕೂಡಲೇ ಆ ಮನೆ ಮೇಲೆ ದಾಳಿ ನಡೆಸಿದೆವು. ಅಲ್ಲಿ ಸಲ್ಮಾ ಹಾಗೂ ಶರೀಫ್ ಸಿಕ್ಕಿಬಿದ್ದರು. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿ ಆಧರಿಸಿ ಉಳಿದ ಮೂವರನ್ನು ವಶಕ್ಕೆ ಪಡೆಯಲಾಯಿತು. ಈ ಗ್ಯಾಂಗ್ ಇದೇ ರೀತಿ ಮೂವರಿಂದ ಸುಲಿಗೆ ಮಾಡಿರುವುದು ಗೊತ್ತಾಗಿದೆ. ಆದರೆ, ಮರ್ಯಾದೆಗೆ ಅಂಜಿ ಅವರ‍್ಯಾರು ದೂರು ಕೊಟ್ಟಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT