ಪಾದಚಾರಿಗಳ ಸುರಕ್ಷತೆಗೆ ‘ನಡೆಯಲು ಬಿಡಿ’ ಅಭಿಯಾನ

7

ಪಾದಚಾರಿಗಳ ಸುರಕ್ಷತೆಗೆ ‘ನಡೆಯಲು ಬಿಡಿ’ ಅಭಿಯಾನ

Published:
Updated:

ಬೆಂಗಳೂರು: ಪಾದಚಾರಿಗಳ ಸುರಕ್ಷತೆಗಾಗಿ ‘ನಡೆಯಲು ಬಿಡಿ’ ಎಂಬ ಘೋಷವಾಕ್ಯದಡಿ ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯು ಅಭಿಯಾನ ಆರಂಭಿಸಿದೆ.

ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ನಗರದ ಎಲ್ಲ ಸಿಗ್ನಲ್‌ಗಳಲ್ಲೂ ಪೆಲಿಕಾನ್ ಬಟನ್‌ಗಳನ್ನು (ಪಾದಾಚಾರಿ ಗುಂಡಿ) ಅಳವಡಿಸಬೇಕು ಎಂದು ಒತ್ತಾಯಿಸಿ ರಿಚ್ಮಂಡ್‌ ಟೌನ್‌ ಬಳಿ ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ಶ್ರೀನಿವಾಸ್ ಅಲವಿಲ್ಲಿ ಹೇಳಿದರು.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸಿಗ್ನಲ್‌ ಬಿದ್ದರೂ ನಿಯಮ ಉಲ್ಲಂಘಿಸಿ ಸಂಚಾರ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ರಸ್ತೆ ದಾಟುವ ವೇಳೆ ಪಾದಚಾರಿಗಳು ಅಪಘಾತಕ್ಕೀಡಾಗುತ್ತಿದ್ದಾರೆ. ಹೀಗಾಗಿ, ಅವರ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.‌

ನಗರದಲ್ಲಿ ನೂರಾರು ಸ್ಕೈವಾಕ್‌ಗಳಿದ್ದರೂ ಅವುಗಳನ್ನು ಜನ ಬಳಸುತ್ತಿಲ್ಲ. ಹಿರಿಯರಿಗೆ ಸ್ಕೈವಾಕ್‌ಗಳನ್ನು ಹತ್ತಿ ಹೋಗಲು ಸಾಧ್ಯವಾಗದೆ ರಸ್ತೆ ದಾಟಲು ಮುಂದಾಗುತ್ತಿದ್ದಾರೆ. ಹೀಗಾಗಿ, ಪೆಲಿಕಾನ್ ಬಟನ್‌ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry