‘ಎಲ್ಲ ಕೈ ಉತ್ಪನ್ನಗಳಿಗೂ ತೆರಿಗೆ ರದ್ದುಗೊಳಿಸಿ’

7

‘ಎಲ್ಲ ಕೈ ಉತ್ಪನ್ನಗಳಿಗೂ ತೆರಿಗೆ ರದ್ದುಗೊಳಿಸಿ’

Published:
Updated:

ಬೆಂಗಳೂರು: 29 ಕೈಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಿದ ಜಿಎಸ್‌ಟಿ ಮಂಡಳಿಯ‌ ಕ್ರಮವನ್ನು ಸ್ವಾಗತಿಸಿರುವ ಗ್ರಾಮ ಸೇವಾ ಸಂಘವು, ಉಳಿದ ಎಲ್ಲ ಕೈಉತ್ಪನ್ನಗಳಿಗೂ ತೆರಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದೆ.

‘200 ಕೈ ಉತ್ಪನ್ನಗಳ ತೆರಿಗೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ್ದೆವು. ಅದರನ್ವಯ ಮಂಡಳಿಯು 29 ಉತ್ಪನ್ನಗಳ ಮೇಲಿನ ತೆರಿಗೆ ಕೈಬಿಟ್ಟಿರುವುದು ಹೋರಾಟಕ್ಕೆ ಸಿಕ್ಕ ಮೊದಲ ಜಯ’ ಎಂದು ಸಂಘದ ಸಂಚಾಲಕ ಅಭಿಲಾಷ್ ಹೇಳಿದರು.

ಎಲ್ಲ ಕೈ ಉತ್ಪನ್ನಗಳ ಮೇಲಿನ ತೆರಿಗೆ ರದ್ದುಗೊಳಿಸುವಂತೆ ಆಗ್ರಹಿಸಿ ಯಾದಗಿರಿಯ ಕೊಡೆಕಲ್ ಬಳಿಯಿಂದ ಹಂಪಿ ಬಳಿಯ ಆನೆಗುಂದಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry