ಶಾಸಕರ ಅನುದಾನದಲ್ಲಿಯೇ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿ

7

ಶಾಸಕರ ಅನುದಾನದಲ್ಲಿಯೇ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿ

Published:
Updated:

ಪಾಂಡವಪುರ: ‘ಮೇಲುಕೋಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯು ತ್ತಿರುವ ಎಲ್ಲ ಕಾಮಗಾರಿಗಳು ಶಾಸಕರ ಅನುದಾನದಲ್ಲಿ ಜಾರಿಗೊಂಡವು’ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ ಅವರು ಕೆಲ ಕಾಮಗಾರಿಗಳು ಜಿ.ಪಂ ಹಾಗೂ ಸಂಸದರ ಅನುದಾನದ್ದು ಎಂದು ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ’ ಎಂದರು.

ಶಾಸಕರು ಶಿಷ್ಠಾಚಾರ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪ ತಳ್ಳಿಹಾಕಿದ ಅವರು, ಮೊದಲು ಸಂಸದರಿಗೆ ಶಿಷ್ಠಾಚಾರ ಕಲಿಸಿ ಎಂದು ಹೇಳಿದರು.

‘ನಾನು ಸಂಸದ ಪುಟ್ಟರಾಜುವಿಗಿಂತ ವಯಸ್ಸಿನಲ್ಲಿ ಹಿರಿಯ. ಇದನ್ನು ಅರ್ಥಮಾಡಿಕೊಳ್ಳಬೇಕು. ಸಿ.ಅಶೋಕ ರಾಜಕೀಯವಾಗಿ ಬೆಳೆಯುತ್ತಿರುವ ಯುವಕ. ಈ ರೀತಿ ಆರೋಪದಲ್ಲಿ ತೊಡಗುವುದು ಸರಿಯಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry