ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ

7

ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ

Published:
Updated:

ತುರುವೇಕೆರೆ: ತಾಲ್ಲೂಕಿನ ಪುರ ಗ್ರಾಮದ ಶಂಭುಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ಶಂಭುಲಿಂಗೇಶ್ವರ ಸ್ವಾಮಿಯ ರಥಕ್ಕೆ ವಿವಿಧ ಬಣ್ಣದ ಬಟ್ಟೆ, ಹಲವು ರೀತಿಯ ಹೂಗಳಿಂದ ಸಿಂಗರಿಸಲಾಗಿತ್ತು. ದೇವರನ್ನು ರಥದ ಮೇಲೆ ಕೂರಿಸಿದ ನಂತರ ವಿಶೇಷ ಪೂಜೆ, ಬಂಡಿ ಪೂಜೆ ಮುಂತಾದ ರ್ಧಾಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮಹಾ ಮಂಗಳಾರತಿಯಾದ ನಂತರ ಭಕ್ತರು ಶಂಭುಲಿಂಗನ ಜಯಘೋಷದೊಂದಿಗೆ ರಥವನ್ನು ಎಳೆದರು.

ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ರಥೋತ್ಸವ ಬನ್ನಿಮರದ ಬಳಿಗೆ ತೆರಳಿ ಹಿಂತಿರುಗಿತು. ರಥಕ್ಕೆ ಭಕ್ತರು ಹಣ್ಣು, ಧವನವನ್ನು ತೂರುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ 7 ದಿನಗಳ ಕಾಲ ದನಗಳ ಜಾತ್ರೆ ನಡೆಯಿತು.

ರಥೋತ್ಸವದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಂಜೇಗೌಡ, ಸದಸ್ಯರಾದ ಪಿ.ಎಲ್.ನವೀನ್ ಕುಮಾರ್, ಮುಖಂಡರಾದ ಗುರುರಾಜ್, ಮಹೇಶ್, ಪಿ.ಟಿ.ಗಂಗಾಧರ್, ಎಂ.ಸಿ.ರೇಣುಕಪ್ಪ, ಬಸವರಾಜು, ಎಂ.ಟಿ.ಮೋಹನ್, ಜೈಪ್ರಕಾಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry