7

ವೈಭವದ ಸೋಮನಾಥ ದೇವರ ಉಚ್ಛಾಯಿ

Published:
Updated:
ವೈಭವದ ಸೋಮನಾಥ ದೇವರ ಉಚ್ಛಾಯಿ

ಕಕ್ಕೇರಾ: ಪಟ್ಟಣದ ಆರಾಧ್ಯದೈವ ಸೌರಾಷ್ಟ್ರ ಅಧಿಪತಿ ಸೋಮನಾಥ ದೇವರ ಜಾತ್ರೆ ಪ್ರಯುಕ್ತ ಗುರುವಾರ ಸಂಜೆ ಉಚ್ಛಾಯಿ (ಲಘು ರಥೋತ್ಸವ) ಸಹಸ್ರಾರು ಭಕ್ತ ಸಮೂಹ ಮತ್ತು ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ನಡೆಯಿತು. ಭಕ್ತ ಸಮೂಹ ಉತ್ತತ್ತಿ, ಬಾಳೇಹಣ್ಣು ಹಾಗೂ ಚಪ್ಪಾಳೆ ತಟ್ಟುವ ಮೂಲಕ ಉಚ್ಛಾಯಿ ರಥಕ್ಕೆ ಸಮರ್ಪಸಿ ಭಕ್ತಿಯನ್ನು ಸಮರ್ಪಿಸಿದರು.

ತೆಂಗಿನಗರಿ, ಬಾಳೆಗೊನೆ ಮತ್ತು ಹೂಗಳಿಂದ ಶೃಂಗಾರಗೊಂಡಿದ್ದ ರಥಕ್ಕೆ ಪೂಜ್ಯ ನಂದಣ್ಣಪ್ಪ ಪೂಜಾರಿಯವರ ವಿಶೇಷ ಪೂಜೆ ನೇರವೇರಿಸಿದರು. ರಥದ ಸುತ್ತಲೂ ದೇವರ ಪಲ್ಲಕ್ಕಿ ಪ್ರದಕ್ಷಿಣೆ ಹಾಕಿದ ನಂತರ ಅಯ್ಯಣ್ಣ ಪೂಜಾರಿ, ಮುತ್ತಣ್ಣ ಪೂಜಾರಿ, ಚಕ್ರಪ್ಪ ಪೂಜಾರಿ, ರಥ ಎಳೆಯುವುದಕ್ಕೆ ಚಾಲನೆ ನೀಡಿದರು.

ರಥವು ಪಾದಗಟ್ಟೆಯವರೆಗೆ ಸಾಗಿ, ನಂತರ ಬಸವಣ್ಣನ ದೇವಸ್ಥಾನಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ನಂತರ ರಥವು ಸ್ವಸ್ಥಾನ ತಲುಪಿತು. ರಥದ ಹಿಂದೆ ದೇವರ ಪಲ್ಲಕ್ಕಿ ಹಾಗೂ ಕಳಸ ಹಿಡಿದ ಮಹಿಳೆಯರು, ದೇವರ ಸೇವಕರು ಇದ್ದರು.

ಪರಮಣ್ಣ.ಎಸ್.ಪೂಜಾರಿ, ಭೀಮಣ್ಣ ಮುತ್ಯಾ ಪೂಲಭಾವಿ, ಪಟ್ಟಣದ ಹಣಮಂತರಾಯಗೌಡ ಜಹಾಗೀರದಾರ, ಸೋಮನಿಂಗಪ್ಪ ದೇಸಾಯಿ, ಸೋಮಣ್ಣ ಗುರಿಕಾರ, ದೊಡ್ಡಸೋಮನಿಂಗಪ್ಪ ಬೋಯಿ, ವೀರಸಂಗಪ್ಪ ಸಾಹುಕಾರ, ನಂದಣ್ಣ ದೇಸಾಯಿ, ನಂದಣ್ಣವಾರಿ ಇದ್ದರು. ಪಿಎಸ್‍ಐ ಅರ್ಜುನಪ್ಪ ಹೊಸಕೇರಿ, ಎಎಸ್‍ಐ ಶ್ಯಾಮಸುಂದರನಾಯಕ ಪೊಲೀಸ್ ಬಂದೋಬಸ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry