ಪದ್ಮಾವತ್‌ ಸಿನಿಮಾ ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಅಸಾದುದ್ದೀನ್ ಓವೈಸಿ ಕರೆ

7

ಪದ್ಮಾವತ್‌ ಸಿನಿಮಾ ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಅಸಾದುದ್ದೀನ್ ಓವೈಸಿ ಕರೆ

Published:
Updated:
ಪದ್ಮಾವತ್‌ ಸಿನಿಮಾ ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಅಸಾದುದ್ದೀನ್ ಓವೈಸಿ ಕರೆ

ಹೈದರಾಬಾದ್‌: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ’ಪದ್ಮಾವತ್’ ಬಕ್ವಾಸ್ ಸಿನಿಮಾವಾಗಿದ್ದು ಅದನ್ನು ನೋಡದಿರುವಂತೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಓವೈಸಿ, ಪದ್ಮಾವತ್‌ ಬಕ್ವಾಸ್ ಸಿನಿಮಾವಾಗಿದ್ದು ಮುಸ್ಲಿಂ ಸಮುದಾಯದವರು ಇದನ್ನು ನೋಡಿ ಸಮಯ ಮತ್ತು ಹಣವನ್ನು ವ್ಯರ್ಥಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ. ಅದರಲ್ಲೂ ಯುವಕರು ಈ ಸಿನಿಮಾವನ್ನು ನೋಡಬಾರದು ಎಂದು ಹೇಳಿದ್ದಾರೆ.

ಕಾದಂಬರಿ ಆಧಾರಿತ ಕಥೆಯನ್ನು ಹೊಂದಿದ್ದರೂ ಸಿನಿಮಾದಲ್ಲಿ ಕಾಲ್ಪನಿಕ ಸನ್ನಿವೇಶಗಳನ್ನು ತುಂಬಲಾಗಿದೆ. ಅಲ್ಲದೇ ಈ ಸಿನಿಮಾದ ಕಥೆಗೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ ಎಂದರು.  ರಜಪೂತರ ರಾಣಿ ಪದ್ಮಾವತಿ ಹಾಗೂ ಚಕ್ರವರ್ತಿ ಅಲ್ಲಾವುದ್ದೀನ್ ಖಿಲ್ಜಿ ಸುತ್ತಲೂ ಸುತ್ತುವ ಈ ಚಿತ್ರವನ್ನು ನೋಡದಂತೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry