ಚಿಕ್ಕಜಾಜೂರು: ದೊಡ್ಡ ಮಾರಿಕಾಂಬ ದೇವಿ ಜಾತ್ರೆ

7

ಚಿಕ್ಕಜಾಜೂರು: ದೊಡ್ಡ ಮಾರಿಕಾಂಬ ದೇವಿ ಜಾತ್ರೆ

Published:
Updated:

ಚಿಕ್ಕಜಾಜೂರು: ಕೊಡಗವಳ್ಳಿಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆರಂಭವಾದ ದೊಡ್ಡ ಮಾರಿಕಾಂಬ ಜಾತ್ರೆಯಲ್ಲಿ ರಾಜಕೀಯ, ಜಾತಿ ಭೇದ–ಭಾವವನ್ನು ಮರೆತು ಭಕ್ತರು ಒಂದಾಗಿ ಪಾಲ್ಗೊಂಡಿರುವುದು ಕಂಡು ಬಂತು.

ಜಾತ್ರೆ ಅಂಗವಾಗಿ ಪ್ರತಿಷ್ಠಾಪಿಸಿರುವ ದೊಡ್ಡ ಮಾರಿಕಾಂಬ ದೇವಿಯ ಗಾವನ್ನು ವೀಕ್ಷಿಸಲು ಗ್ರಾಮಸ್ಥರು ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರೊಂದಿಗೆ ಗುರುವಾರ ಸಂಜೆ ಬಂದು ಶ್ರದ್ಧಾ ಭಕ್ತಿಯಿಂದ ಹರಕೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ದೇವಿಗೆ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಗ್ರಾಮಸ್ಥರು ಪೋತರಾಜರನ್ನು ಹಿರಿಯರ ಮನೆಯಲ್ಲಿ ಮಧುವಣಿಗರನ್ನಾಗಿ ಮಾಡಿಕೊಂಡು ಗಂಗಾ ಪೂಜೆ ಸಲ್ಲಿಸಿದರು. ನಂತರ ಪೋತರಾಜರನ್ನು ದೇವಿಯನ್ನು ಪ್ರತಿಷ್ಠಾಪನೆ ಮಾಡಿದ ಸ್ಥಳಕ್ಕೆ ಕರೆತರಲಾಯಿತು. ಪೋತರಾಜರು ದೇವಿಗೆ ವಿವಿಧ ಪೂಜೆಗಳನ್ನು ಸಲ್ಲಿಸಿದ ನಂತರ ವಿಧಿವಿಧಾನ ನೆರವೇರಿಸಲಾಯಿತು.

ನಾಟಕ ಪ್ರದರ್ಶನ: ಜಾತ್ರೆಯ ಅಂಗವಾಗಿ ಗ್ರಾಮದ ಯುವಕರಿಂದ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಎಂ. ಪಾಲೇಗೌಡ್ರು ಸ್ಮರಣಾರ್ಥ ರಾತ್ರಿ 10ಕ್ಕೆ ‘ಮಿಡಿದ ಹೃದಯಗಳು’ ಎಂಬ ನಾಟಕ ಪ್ರದರ್ಶನಗೊಂಡಿತು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ, ಬಿ.ಗೋಪಾಲಪ್ಪ, ಕೆ.ಪಿ.ಪಾಲಯ್ಯ, ಮುಖಂಡರಾದ ಎಂ.ಜಿ. ಲೋಹಿತ್‌ಕುಮಾರ್‌, ಕೆ. ಚನ್ನಪ್ಪ, ಜಿ.ಓ.ಪುಟ್ಟಸ್ವಾಮಿ, ಗೌರಿ ರಾಜಕುಮಾರ್‌, ಸಾಹಿತಿ ಬಿ.ಎಸ್‌. ಮಂಜಪ್ಪ, ಕೆ.ಆರ್‌. ಕೃಷ್ಣಮೂರ್ತಿ, ಕೆ. ರಂಗಪ್ಪ, ವಕೀಲ ಅರುಣ್‌ ಕುಮಾರ್‌, ಮಧು ಪಾಲೇಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ರಾಘು ಪಾಲೇಗೌಡ, ರೇಣುಕಾ, ಶಾರದಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry