ಸೂರ್ಯ ರೈತ ಯೋಜನೆಗೆ ಚಾಲನೆ

7

ಸೂರ್ಯ ರೈತ ಯೋಜನೆಗೆ ಚಾಲನೆ

Published:
Updated:
ಸೂರ್ಯ ರೈತ ಯೋಜನೆಗೆ ಚಾಲನೆ

ರಾಮನಗರ: ಸೌರಶಕ್ತಿ ಆಧರಿತ ನೀರಾವರಿ ಪಂಪ್ ಸೆಟ್ ಚಾಲನೆಯ ‘ಸೂರ್ಯ ರೈತ’ ಯೋಜನೆಗೆ ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.‌ ಪಾಟೀಲ ಶುಕ್ರವಾರ ಚಾಲನೆ ನೀಡಿದರು.

ರೈತರ ಹೊಲದಲ್ಲಿಯೇ ಸೌರಶಕ್ತಿ ಫಲಕಗಳ ಮೂಲಕ‌ ವಿದ್ಯುತ್ ಉತ್ಪಾದನೆ ಮಾಡುವುದು. ಅದರಿಂದಲೇ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ಮಾಡುವುದು ಇದರ ವಿಶೇಷ. ಅಲ್ಲದೆ, ಹೆಚ್ಚುವರಿಯಾಗಿ ಉತ್ಪಾದನೆ ಆಗುವ  ವಿದ್ಯುತ್ ನೇರವಾಗಿ ಬೆಸ್ಕಾಂ ಲೇನ್ ಸೇರಿ ರೈತರಿಗೆ ಆದಾಯವನ್ನು ತಂದುಕೊಡಲಿದೆ.

ಹಾರೋಬೆಲೆ ಗ್ರಾಮ ಪಂಚಾಯಿತಿಯ 310 ಕೃಷಿ ಪಂಪ್ ಸೆಟ್ ಗಳಿಗೆ ಇಂತಹ ಸೌರ ಘಟಕಗಳನ್ನು ಅಳವಡಿಸುವ ಕಾರ್ಯ ನಡೆದಿದ್ದು, 250 ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಇದಕ್ಕಾಗಿ ಇಂಧನ ಇಲಾಖೆಯು ₹ 24.36 ಕೋಟಿ ವ್ಯಯಿಸುತ್ತಿದೆ.

‘ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಯೋಜನೆಯೊಂದು ಜಾರಿಗೊಳ್ಳುತ್ತಿದೆ. ದೇಶ ವಿದೇಶಗಳ ಪ್ರತಿನಿಧಿಗಳು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry