‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

7

‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

Published:
Updated:
‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

ರೈಲು, ಬಸ್‌ ನಿಲ್ದಾಣಗಳಲ್ಲಿ ‘ದಯವಿಟ್ಟು ಗಮನಿಸಿ’ ಎಂಬ ಮಾತು ಧ್ವನಿವರ್ಧಕದ ಮೂಲಕ ಆಗಾಗ ಕೇಳಿಬರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಈ ಹೆಸರನ್ನು ಇಟ್ಟುಕೊಂಡು ರೋಹಿತ್ ಪದಕಿ ಅವರು ಕಳೆದ ವರ್ಷ ಒಂದು ಸಿನಿಮಾ ಮಾಡಿದ್ದರು. ಅದೇ ರೀತಿ ಈ ನಿಲ್ದಾಣಗಳಲ್ಲಿ ‘ಪ್ರಯಾಣಿಕರ ಗಮನಕ್ಕೆ’ ಎಂಬ ಮಾತೂ ಆಗಾಗ ಕೇಳಿಬರುತ್ತಿರುತ್ತದೆ.

ಈಗ ಇನ್ನೊಂದು ಸಿನಿತಂಡ ‘ಪ್ರಯಾಣಿಕರ ಗಮನಕ್ಕೆ’ ಎಂಬ ಹೆಸರಿನಲ್ಲಿ ಸಿನಿಮಾ ಸಿದ್ಧಪಡಿಸುತ್ತಿದೆ. ಬಸ್ಸಿನಲ್ಲಿ ಹೋಗುವ ಪ್ರಯಾಣಿಕರ ನಡುವೆ ಏನೆಲ್ಲ ಘಟನೆಗಳು ನಡೆಯಬಹುದು ಎಂಬುದನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಕಟ್ಟಿಕೊಡಲು ತಂಡ ಸಜ್ಜಾಗಿದೆ. ಈ ಸಿನಿಮಾದಲ್ಲಿ ಹಾಸ್ಯ ಕೂಡ ಭರಪೂರ ಇರಲಿದೆಯಂತೆ. ಹಾಗೆಯೇ, ಕತ್ತಲ ವೇಳೆ ಬೆಂಗಳೂರು ನಗರ ಹೇಗಿರುತ್ತದೆ ಎಂಬುದನ್ನು ತೋರಿಸುವ ಯತ್ನವೂ ಇದರಲ್ಲಿ ಇರುತ್ತದೆಯಂತೆ.

ಮನೋಹರ್ ಅವರು ಈ ಸಿನಿಮಾಕ್ಕೆ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಪ್ರಮುಖವಾಗಿ ಏಳು ಪಾತ್ರಗಳು ಇರಲಿವೆ ಎಂದು ಚಿತ್ರತಂಡ ಹೇಳಿದೆ.

ಭರತ್, ಕಾಮಿಡಿ ಕಿಲಾಡಿ ಖ್ಯಾತಿಯ ಲೋಕೇಶ್, ಅಮಿತಾ ರಂಗನಾಥ್, ಪವಿತ್ರಾ, ನಿನಾದ್‍ ಹರೀಶ್‍ಷಾ, ದೀಪಕ್‍ ಶೆಟ್ಟಿ, ಅಮಿತಾ, ಗೋಪಾಲಕೃಷ್ಣ ದೇಶಪಾಂಡೆ, ಪ್ರಣಯಮೂರ್ತಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸುರೇಶ್ ಮತ್ತು ಮೋಹನ್‍ ಕುಮಾರ್ ಎಸ್.ಕೆ. ಅವರು ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry