ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯವೈಶ್ಯ ಸಾಹಿತ್ಯ ಪರಿಷತ್ ದಶಮಾನೋತ್ಸವ ಇಂದು

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ದಶಮಾನೋತ್ಸವ ಸಮಾರಂಭ ಶನಿವಾರ (ಜ. 20) ಬೆಳಿಗ್ಗೆ 10.30ಕ್ಕೆ ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಹಂ.ಪ.ನಾಗರಾಜಯ್ಯ ಅವರು ನೆರವೇರಿಸಲಿದ್ದಾರೆ. ಶಾಸಕ ಬಿ.ಎನ್.ವಿಜಯಕುಮಾರ್, ಪಾಲಿಕೆ ಸದಸ್ಯೆ ನಾಗರತ್ನ ರಾಮಮೂರ್ತಿ, ಎಂ.ಬದರಿನಾರಾಯಣ್‌, ರವೀಂದ್ರ ಭಟ್ಟ, ಮೃತ್ಯಂಜಯ ಕಪಗಲ್ ಅವರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಗೌರವ್‌ ಸುಧಾ ಮುರಳಿ ಮತ್ತು ತಂಡದ ಕಲಾವಿದರಿಂದ ಸುಗಮ ಸಂಗೀತ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀವಾರಿ ಭಜನಾ ಸಂಘದಿಂದ ಸುಗಮ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

ಸಂಜೆ 4ಕ್ಕೆ ‘ಸಾಮಾಜಿಕ ಸೇವೆಯಲ್ಲಿ ಆರ್ಯವೈಶ್ಯ ಮಹಿಳೆಯರ ಪಾತ್ರ’ದ ಕುರಿತು ಸುಮಾ ಮೂರ್ತಿ ಅವರು ಮಾತನಾಡಲಿದ್ದಾರೆ. ‘ಆರ್ಯವೈಶ್ಯರ ಕೌಟುಂಬಿಕ ಸಮಸ್ಯೆಗಳು’ ವಿಷಯದ ಕುರಿತು ವಿ.ಸೌಭಾಗ್ಯಲಕ್ಷ್ಮಿ ಅವರು ಚರ್ಚಿಸಲಿದ್ದಾರೆ. ಈ ಗೋಷ್ಠಿಯಲ್ಲಿ ಎ.ಆರ್.ಮೇಘ, ವತ್ಸಲಾ ಮದನ್, ಪ್ರೊ.ಚಂದ್ರಮ್ಮ ಅವರು ಉಪಸ್ಥಿತರಿರಲಿದ್ದಾರೆ.  ಸಂಜೆ 5ಕ್ಕೆ ಗೌರವ ಸಮರ್ಪಣಾ ಸಮಾರಂಭ ನಡೆಯಲಿದೆ.

ಜಿ.ಎನ್.ವಿಶ್ವನಾಥ್‌ ಹಾಗೂ ಗಿರೀಶ್ ಪೆಂಡಕೂರು ಮತ್ತು ಕೆ.ವಿ.ಕೃಷ್ಣಯ್ಯ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಿದರೆ, ಡಿ.ವಿ.ಎಸ್‌. ಗುಪ್ತ ಅವರು ಈ ಕಾರ್ಯಕ್ರದ ಅಧ್ಯಕ್ಷತೆವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಜಾಜಿ ಶಾರದಾ ಶ್ರೀನಿವಾಸನ್ ಅವರಿಂದ ಸಿತಾರ್ ವಾದನ, ಗೀತಾ ವಾಸವಿ ಮಹಿಳಾ ಮಂಡಳಿ ಕಲಾವಿದರಿಂದ ಕೋಲಾಟ ಹಾಗೂ ಸುಮಾ ಸತೀಶ್ ಅವರಿಂದ ಯುಗಾದಿ ಸಂಭ್ರಮ ಹಾಸ್ಯ ನಾಟಕ ಪ್ರಸ್ತುತಿ ಇರಲಿದೆ.

ಸಾಹಿತ್ಯ ಸಮ್ಮೇಳನ: ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಭಾನುವಾರ (ಜ.21) ಏಳನೆಯ ಸಾಹಿತ್ಯ ಸಮ್ಮೇಳನವನ್ನು ಜಯನಗರದ ಕಬಡ್ಡಿ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ.ವಾಸುದೇವ ಮೂರ್ತಿ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 8.30ಕ್ಕೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್, ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ, ರಾ.ಪ.ರವಿಶಂಕರ್‌, ಐ.ಎಸ್‌.ಪ್ರಸಾದ್‌, ಜೆ.ವಿ.ನಂದನ್‌ ಕುಮಾರ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಟಿ.ಶ್ರೀನಿವಾಸ್ ಅವರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆ. ಅದೇವೇಳೆ ಎಸ್‌.ಕೃಷ್ಣಮೂರ್ತಿ ಅವರ ‘ತುಂತುರು’ ಕವನ ಸಂಕಲನ ಲೋಕಾರ್ಪಣೆ ಮಾಡಲಾಗುವುದು.

ಟಿ.ಎ.ಪಿ.ನಾಗರಾಜ್ ಅವರ ‘ಮಧುಸೂಕ್ತಿ’, ‘ಸ್ಮೃತಿ ಚಿಂತನ’ ಹಾಗೂ ‘ಮಂಥನ’ ಕೃತಿಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಆರ್.ಸುರೇಶ್ ಬಾಬು, ವೈ.ಸಿ.ಜಗದೀಶ ಬಾಬು, ಟಿ.ಎ.ಪಿ. ನಾಗರಾಜ್‌, ಎಚ್‌.ಪಂಪಯ್ಯ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಯಿಂದ ಜಯನಗರ ವಾಸವಿ ಮಹಿಳಾ ಮಂಡಳಿ ಸದಸ್ಯರಿಂದ ಸುಗಮ ಸಂಗೀತ ಗಾಯನ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ‘ಆರ್ಯವೈಶ್ಯ ಸಮಾಜದ ಮುಂದಿರುವ ಸವಾಲುಗಳು’ ಕುರಿತು ರಾಜಾ ಶೈಲೇಶಚಂದ್ರ ಗು‍ಪ್ತ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ನಂತರ ‘ಕನ್ನಡ ಸಾಹಿತ್ಯಕ್ಕೆ ಆರ್ಯವೈಶ್ಯರ ಕೊಡುಗೆ’ ಕುರಿತು ಟಿ.ವಿ. ಸುರೇಶ ಗುಪ್ತ ಅವರು ವಿಷಯ ಮಂಡಿಸುತ್ತಾರೆ. ಮಧ್ಯಾಹ್ನ 3.30ರಿಂದ ವಾಸವಿ ಗಾನ ಲಹರಿ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ. ಸಂಜೆ 4.30ರಿಂದ ಕವಿಗೋಷ್ಠಿ ನಡೆಯಲಿದೆ.

ಸಂಜೆ 5.30ಕ್ಕೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ. ಕೆ.ವಿ.ವೆಂಕಟೇಶ್‌ ಬಾಬು, ಬಿ.ಜಿ.ನಂದಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7ಕ್ಕೆ ವಿದುಷಿ ರಮ್ಯಾ ಸೂರಜ್, ಸುಪ್ರದ ಕಲಾನಿಕೇತನ ಅವರಿಂದ ‘ಅವತರಿಸಿದಳು ವಾಸವಿ’ ನೃತ್ಯರೂಪಕ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT