ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಧನ್ವಂತ್ರಿ’ ವಿಶೇಷ

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ರ್ನಾಟಕ ಶಾಸ್ತ್ರೀಯ ಸಂಗೀತದ ಅವಿಭಾಜ್ಯ ಅಂಗವಾಗಿದ್ದ ಕೊನಗೋಲು ಸಂಗೀತದ ಪ್ರಾಚೀನ ಭಾಷೆ. ಮರೆಗೆ ಸರಿಯುತ್ತಿರುವ ಈ ಕಲಾ ಪ್ರಕಾರಕ್ಕೆ ಮತ್ತೆ ಮೆರುಗು ನೀಡುವ ಪ್ರಯತ್ನಗಳಲ್ಲಿ ಕೆಲ ಕಲಾವಿದರು ತೊಡಗಿಸಿಕೊಂಡಿದ್ದಾರೆ. ಇಂಥವರ ಪೈಕಿ ನಗರದ ಬಿ.ಆರ್. ಸೋಮಶೇಖರ ಜೋಯಿಸ್ ಪ್ರಮುಖರು. ವಿಶ್ವ ಕೊನಗೋಲು ಅಕಾಡೆಮಿಯ ಮೂಲಕ ಆಸಕ್ತರಿಗೆ ಕೊನಗೋಲು ಕಲಿಸುತ್ತಿದ್ದಾರೆ.

* ಏನಿದು ಕೊನಗೋಲು?
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತಾಳವಾದ್ಯಗಳ ಶಬ್ದಾಕ್ಷರಗಳನ್ನು ಬಾಯಿಯ ಮೂಲಕ ವಾಚನ ಮಾಡುವುದೇ ಕೊನಗೋಲು. ಇದನ್ನು ಕೊನ್ನಕೋಲ್ ಎಂದೂ ಕರೆಯುತ್ತಾರೆ. ಸಂಸ್ಕೃತ, ಕನ್ನಡದಂತೆ ಇದು ತಾಳವಾದ್ಯಗಳ ಭಾಷೆ. ಇದಕ್ಕೆ 5000 ವರ್ಷಗಳಷ್ಟು ದೀರ್ಘ ಇತಿಹಾಸ ಇದೆ. ವೇದಕಾಲದಿಂದಲೂ ಇದು ಇದೆ. ಬೇರೆಬೇರೆ ಕಾಲಘಟ್ಟದಲ್ಲಿ ಇದನ್ನು ಬೇರೆಬೇರೆ ಹೆಸರುಗಳಿಂದ ಕರೆದಿದ್ದಾರೆ. ದಕ್ಷಿಣ ಭಾರತದ ಸಂಗೀತ ಕಛೇರಿಗಳಲ್ಲಿ ಕೊನಗೋಲು ಹಾಡುತ್ತಾರೆ. ಇದು ಪ್ರಾಚೀನ ಕಲೆ. ಹಾಗೆಯೇ ನಿತ್ಯನೂತನ.

* ಯಾರು ಕಲಿಯಬಹುದು?
ಯಾರಿಗೆ ಮಾತನಾಡಲು ಬರುತ್ತದೆಯೋ ಅವರೆಲ್ಲರೂ ಕೊನಗೋಲು ಕಲಿಯಬಹುದು. ಇದಕ್ಕೆ ಪ್ರಾಯ, ಲಿಂಗ, ಜಾತಿ, ಧರ್ಮ ಭೇದವಿಲ್ಲ. ಆದರೆ ಆಸಕ್ತಿ ಬಹುಮುಖ್ಯ. 150 ವರ್ಷಗಳ ಹಿಂದಿನವರೆಗೂ ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ ಅಂಗವಾಗಿತ್ತು. ಅನಂತರ ಕ್ಷೀಣಿಸುತ್ತಾ ಬಂದಿದೆ. ಈ ಕಲೆಯಲ್ಲಿ ತುಂಬಾ ಅವಕಾಶಗಳಿವೆ. ಕಲಾಸಂಸ್ಥೆಗಳು, ಸಂಗೀತಾಸಕ್ತರು ಇದರ ಕಲಿಕೆಗೆ ಮುಂದೆ ಬರಬೇಕು. ಜನರಿಗೆ ಈ ಬಗ್ಗೆ ತಿಳಿಸಬೇಕು.

* ನಿಮಗೆ ಆಸಕ್ತಿ ಮೂಡಿದ್ದು ಹೇಗೆ?
ನಾನು ಆರನೇ ವಯಸ್ಸಿನಲ್ಲಿ ಮೃದಂಗ ಕಲಿಯಲು ಆರಂಭಿಸಿದ್ದೆ. ಆದರೆ ಕೊನಗೋಲು ಕಲಿಯಲು ನನಗೆ ಪ್ರೇರಣೆಯಾಗಿದ್ದು, ನನ್ನ ಗುರುಗಳಾದ ಬಿ.ಸಿ. ಮಂಜುನಾಥ್., ಕೆ.ಎನ್. ಕೃಷ್ಣಮೂರ್ತಿ, ಕೆ.ವಿ. ಪ್ರಸಾದ್. ಈ ಕಲೆಯಲ್ಲಿ ನನಗೆ ಮತ್ತಷ್ಟು ಅವಕಾಶ ಹಾಗೂ ಪ್ರೋತ್ಸಾಹ ನೀಡಿದವರು ಆನೂರು ಅನಂತಕೃಷ್ಣ ಶರ್ಮಾ. ಇವರೆಲ್ಲರೂ ಕೊನಗೋಲು ಕಲೆಗೆ ಅತ್ಯಮೂಲ್ಯ ಕೊಡುಗೆ ನೀಡಿದವರು.

* ಅಕಾಡೆಮಿ ಸ್ಥಾಪನೆ ಉದ್ದೇಶ?
ಕಳೆದ ವರ್ಷ ನಾನು ವಿಶ್ವ ಕೊನಗೋಲು ಅಕಾಡೆಮಿ ಸ್ಥಾಪಿಸಿದೆ. ಆಸಕ್ತರಿಗೆ ಕೊನಗೊಲು ಕಲಿಸುವುದು ಮತ್ತು ಈ ಕಲೆಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವುದು ಇದರ ಉದ್ದೇಶ. ಈಗಾಗಲೇ ವಿದೇಶಿಯರು ಸೇರಿದಂತೆ ಹಲವರು ಇದನ್ನು ಕಲಿಯುತ್ತಿದ್ದಾರೆ. ವಿದೇಶದಲ್ಲೂ ಕೊನಗೋಲು ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ಅಕಾಡೆಮಿಯ ಮೂಲಕ ಈ ಕಲೆಗಾಗಿಯೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ.

* ಸಂಗೀತ ಥೆರಪಿಯಲ್ಲಿ ಕೊನಗೋಲು ಪಾತ್ರ?
ಕೊನಗೋಲು ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ ಮಾತ್ರವಲ್ಲ. ಇದನ್ನು ಕಲಿಯುವ ಮೂಲಕ ಗಾಯಕ, ವಾದಕರು ಲಯದ ಮೇಲೆ ಹಿಡಿತ ಸಾಧಿಸಬಹುದು. ಈ ಮೂಲಕ ಪ್ರಪಂಚದ ಯಾವುದೇ ತಾಳವಾದ್ಯ ಕಲೆಯನ್ನು ಅರ್ಥೈಸಿಕೊಳ್ಳಬಹುದು. ಸಂಗೀತ ಥೆರಪಿಯಲ್ಲೂ ಇದನ್ನು ಬಳಕೆ ಮಾಡುತ್ತಾರೆ. ಬೆಂಗಳೂರಿನವರೇ ಆದ ಸನಕ್ ಆತ್ರೇಯ ದಂಪತಿ 'ಸ್ವರ ಕ್ಷೇಮ' ಸಂಸ್ಥೆಯ ಮೂಲಕ ಉಗ್ಗು, ತೊದಲು ಇರುವ ಮಕ್ಕಳಿಗೆ ಕೊನಗೋಲು ಬಳಕೆಯ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.

*

ಸುಬ್ರಹ್ಮಣಿಯಮ್‌ಗೆ ಸಾಮಗಾನ ಮಾತಂಗ ಪ್ರಶಸ್ತಿ
ಭಾರತೀಯ ಸಾಮಗಾನ ಸಭಾದ ಪ್ರತಿಷ್ಠಿತ ಸಾಮಗಾನ ಮಾತಂಗ ಪ್ರಶಸ್ತಿಗೆ ಈ ಬಾರಿ ಖ್ಯಾತ ಪಿಟೀಲು ವಾದಕ ಡಾ.ಎಲ್‌.ಸುಬ್ರಹ್ಮಣಿಯಮ್‌ ಭಾಜನರಾಗಿದ್ದಾರೆ. ಭಾನುವಾರ ಸಂಜೆ 5ಗಂಟೆಗೆ ಸುಬ್ರಹ್ಮಣಿಯಮ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT