ಯುವತಿ ಅಪಹರಣ ಆರೋಪ: ಬಜರಂಗದಳ ಮುಖಂಡನ ಬಂಧನ

7

ಯುವತಿ ಅಪಹರಣ ಆರೋಪ: ಬಜರಂಗದಳ ಮುಖಂಡನ ಬಂಧನ

Published:
Updated:

ಮಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬಜರಂಗದಳ ಮುಖಂಡ ಸುನಿಲ್ ಪಂಪ್‌ವೆಲ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿ, ಕರೆದೊಯ್ದಿದ್ದಾರೆ.

ನಗರದ ಕಾಲೇಜೊಂದರಲ್ಲಿ ಓದುತ್ತಿದ್ದ ಯುವತಿ, ಇಕ್ಬಾಲ್ ಎಂಬವರನ್ನು ಮದುವೆಯಾಗಿದ್ದಳು. ನಂತರ ಇಕ್ಬಾಲ್‌ ಜತೆ ಮುಂಬೈಯಲ್ಲಿ ವಾಸವಾಗಿದ್ದಳು. ಇದು ಲವ್ ಜಿಹಾದ್ ಎಂದು ಆರೋಪಿಸಿದ ಯುವತಿಯ ತಂದೆ–ತಾಯಿ, ಆಕೆಯನ್ನು ಮುಂಬೈನಿಂದ ತಮ್ಮೊಂದಿಗೆ ಮಂಗಳೂರಿಗೆ ಕರೆತಂದಿದ್ದಾರೆ.

ಕೆಲ ದಿನಗಳ ಹಿಂದೆ ಇಕ್ಬಾಲ್, ಮುಂಬೈ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ‘ನನ್ನ ಹೆಂಡತಿಯ ಅಪಹರಣ ಮಾಡಲಾಗಿದ್ದು, ಹುಡುಕಿ ಕೊಡಿ’ ಎಂದು ಮನವಿ ಮಾಡಿದ್ದರು. ಮುಂಬೈ ಪೊಲೀಸರ ತಂಡ ನಗರಕ್ಕೆ ಬಂದು ಮಹಿಳೆಗಾಗಿ ಹುಡುಕಾಟ ನಡೆಸಿತ್ತು. ಇದೀಗ ಆಕೆಯ ಅಪಹರಣದ ಆರೋಪದಡಿ ಸುನಿಲ್ ಪಂಪ್‌ವೆಲ್‌ನನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry