ಅತ್ಯಾಚಾರಕ್ಕೆ ಸಹಕಾರ ಆರೋಪ ಮಹಿಳೆ ಆತ್ಮಹತ್ಯೆ

7

ಅತ್ಯಾಚಾರಕ್ಕೆ ಸಹಕಾರ ಆರೋಪ ಮಹಿಳೆ ಆತ್ಮಹತ್ಯೆ

Published:
Updated:

ವಿಜಯಪುರ: ಅತ್ಯಾಚಾರ ಯತ್ನಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿದ್ದ ಮಹಿಳೆಯೊಬ್ಬರು, ವಿಜಯಪುರ ಜಿಲ್ಲಾ ಆಸ್ಪತ್ರೆಯ ಸ್ನಾನಗೃಹದಲ್ಲಿ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ.

ವಿಜಯಪುರ ತಾಲ್ಲೂಕಿನ ಜಂಬಗಿ ಗ್ರಾಮದ ಸ್ವಾತಿ (35) ಮೃತಪಟ್ಟ ಮಹಿಳೆ. ಜ.17ರಂದು, ಕೆಲಸದ ನೆಪದಲ್ಲಿ ಬಾಲಕಿಯೊಬ್ಬಳನ್ನು ಸ್ವಾತಿ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಸುರೇಶ ಎಂಬಾತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿಯ ಚೀರಾಟ ಕೇಳಿ, ಜನರು ಯುವಕನನ್ನು ಹಾಗೂ ಮಹಿಳೆಯನ್ನು ಹಿಡಿದು ಥಳಿಸಿದ್ದರು. ಬಾಲಕಿಯ ಪೋಷಕರ ದೂರಿನ ಅನ್ವಯ, ಇವರಿಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry