ವಿಪ್ರೊ ಲಾಭ ₹ 1,931 ಕೋಟಿ

7

ವಿಪ್ರೊ ಲಾಭ ₹ 1,931 ಕೋಟಿ

Published:
Updated:
ವಿಪ್ರೊ ಲಾಭ ₹ 1,931 ಕೋಟಿ

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾಸಂಸ್ಥೆಯಾಗಿರುವ ವಿಪ್ರೊ, ಮೂರನೇ ತ್ರೈಮಾಸಿಕದಲ್ಲಿ ₹ 1,931 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

‘ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 2,109 ಕೋಟಿಗೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭವು ಶೇ 8.4ರಷ್ಟು ಕಡಿಮೆಯಾಗಿದೆ’.

‘ಒಟ್ಟಾರೆ ವಹಿವಾಟಿನ ವರಮಾನವು ₹ 13,669 ಕೋಟಿಗಳಷ್ಟಾಗಿದೆ. ವರ್ಷದ ಹಿಂದೆ ವರಮಾನವು ₹ 13,687 ಕೋಟಿಗಳಷ್ಟಿತ್ತು. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಐ.ಟಿ ಸೇವಾ ವಲಯದ ವರಮಾನವು ₹  13,084 ಕೋಟಿಗಳಷ್ಟಾಗಿದೆ.  ವರಮಾನ ಗುರಿ ತಲುಪುವಲ್ಲಿ ಸಂಸ್ಥೆ ವಿಫಲವಾಗಿದೆ’ ಎಂದು ಸಂಸ್ಥೆಯ ಸಿಇಒ ಅಬಿದಾಲಿ ನಿಮೂಚವಾಲಾ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇಷ್ಟಕ್ಕೆ ನಿರಾಶೆ ಪಡಬೇಕಾಗಿಲ್ಲ. ಬ್ಯಾಂಕಿಂಗ್‌, ಹಣಕಾಸು ಸೇವೆ, ವಿಮೆ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸಂಸ್ಥೆಯ ವಹಿವಾಟು ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ಮುಂದಿನ ತ್ರೈಮಾಸಿಕದ ಮುನ್ನೋಟದಲ್ಲಿಯೂ ಇದು ಪ್ರತಿಫಲನಗೊಂಡಿದೆ’.

‘ಡಿಜಿಟಲ್ ವಹಿವಾಟಿನಿಂದ ಶೇ 25ರಷ್ಟು ವರಮಾನ ಬರುತ್ತಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಐ.ಟಿ ಸೇವಾ ವಿಭಾಗದಿಂದ ₹ 13,195 ಕೋಟಿಗಳಷ್ಟು ವರಮಾನ ನಿರೀಕ್ಷಿಸಲಾಗಿದೆ’ ಎಂದರು.

ಮಧ್ಯಂತರ ಲಾಭಾಂಶ: ಸಂಸ್ಥೆಯು ಪ್ರತಿ ಷೇರಿಗೆ ₹ 1ರಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ.

₹ 328.45: ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಷೇರಿನ ಬೆಲೆ

8.4 %: ನಿವ್ವಳ ಲಾಭದಲ್ಲಿನ ಕುಸಿತದ ಪ್ರಮಾಣ

1,62,553: 3ನೇ ತ್ರೈಮಾಸಿಕ ಅಂತ್ಯಕ್ಕೆ ಸಂಸ್ಥೆಯ ಒಟ್ಟು ಸಿಬ್ಬಂದಿ ಸಂಖ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry