ದೋಕಲಾದಲ್ಲಿ ಸೇನಾ ಸಂಕೀರ್ಣ ನಿರ್ಮಾಣ: ಚೀನಾ ಸಮರ್ಥನೆ

7

ದೋಕಲಾದಲ್ಲಿ ಸೇನಾ ಸಂಕೀರ್ಣ ನಿರ್ಮಾಣ: ಚೀನಾ ಸಮರ್ಥನೆ

Published:
Updated:
ದೋಕಲಾದಲ್ಲಿ ಸೇನಾ ಸಂಕೀರ್ಣ ನಿರ್ಮಾಣ: ಚೀನಾ ಸಮರ್ಥನೆ

ಬೀಜಿಂಗ್‌: ವಿವಾದಿತ ದೋಕಲಾ ಪ್ರದೇಶದಲ್ಲಿ ಬೃಹತ್‌ ಸೇನಾ ಸಂಕೀರ್ಣ ನಿರ್ಮಿಸುತ್ತಿರುವುದನ್ನು ಚೀನಾ ಸಮರ್ಥಿಸಿಕೊಂಡಿದೆ.

ಸೇನಾಪಡೆಗಳ ಯೋಧರು ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಿ ಸಂಕೀರ್ಣ ನಿರ್ಮಿಸುತ್ತಿದ್ದು, ನ್ಯಾಯಯತವಾಗಿದೆ ಎಂದು ಹೇಳಿದೆ.

ಉಪಗ್ರಹದ ಮೂಲಕ ಸೆರೆಹಿಡಿಯಲಾದ ಸೇನಾ ಸಂಕೀರ್ಣದ ಚಿತ್ರದ ವರದಿ ಕುರಿತ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್‌, ‘ವರದಿಯನ್ನು ನಾನೂ ಗಮನಿಸಿದ್ದೇನೆ. ಆದರೆ, ಯಾರು ಈ ಚಿತ್ರಗಳನ್ನು ಬಿಡುಗಡೆಗೊಳಿಸಿದರು ಎಂಬ ಬಗ್ಗೆ ನನಗೆ ತಿಳಿದಿಲ್ಲ’ ಎಂದು ಹೇಳಿದರು.

‘ದೋಕಲಾ ಚೀನಾಕ್ಕೆ ಸೇರಿದ್ದು ಎನ್ನುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈ ಕುರಿತಂತೆ ಯಾವುದೇ ವಿವಾದ ಇಲ್ಲ’ ಎಂದು ಲು ಕಾಂಗ್‌ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry