‌ಉಗ್ರ ಹಫೀಜ್ ವಿಚಾರಣೆ ಆಗಲೇಬೇಕು: ಅಮೆರಿಕ

7
ಪಾಕ್ ಪ್ರಧಾನಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

‌ಉಗ್ರ ಹಫೀಜ್ ವಿಚಾರಣೆ ಆಗಲೇಬೇಕು: ಅಮೆರಿಕ

Published:
Updated:
‌ಉಗ್ರ ಹಫೀಜ್ ವಿಚಾರಣೆ ಆಗಲೇಬೇಕು: ಅಮೆರಿಕ

ವಾಷಿಂಗ್ಟನ್: ಹಫೀಜ್ ಸಯೀದ್ ‘ಭಯೋತ್ಪಾದಕ’ನಾಗಿದ್ದು ಕಾನೂನುಬದ್ಧವಾಗಿ ಆತನ ವಿಚಾರಣೆ ನಡೆಯಬೇಕು ಎಂದು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಿರುವುದಾಗಿ ಅಮೆರಿಕ ಹೇಳಿದೆ.

ಮುಂಬೈ ದಾಳಿ ಸಂಚುಕೋರ ಸಯೀದ್ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ನೀಡಿದ್ದ ಹೇಳಿಕೆಗೆ ಅಮೆರಿಕ ತೀಕ್ಷ್ಣವಾಗಿ ಈ ಪ್ರತಿಕ್ರಿಯೆ ನೀಡಿದೆ.

ಜಿಯೊ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ‍ಅಬ್ಬಾಸಿ ಅವರು ಹಫೀಜ್‌ನನ್ನು ‘ಸಾಹಿಬ್’ ಎಂದು ಸಂಬೋಧಿಸಿದ್ದರು.

ಸಯೀದ್ ವಿರುದ್ಧ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆಗೆ ‘ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನದಲ್ಲಿ ಯಾವುದೇ ಪ್ರಕರಣ ಬಾಕಿ ಇಲ್ಲ. ಪ್ರಕರಣ ಇದ್ದಾಗ ಮಾತ್ರ ವಿಚಾರಣೆ ನಡೆಸಬಹುದು’ ಎಂದು ಅಬ್ಬಾಸಿ ಉತ್ತರಿಸಿದ್ದರು.

ಅಬ್ಬಾಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನವರ್ಟ್ ‘ಆತನನ್ನು ನಾವು ಉಗ್ರ ಎಂದು ಪರಿಗಣಿಸಿದ್ದೇವೆ. ಅಮೆರಿಕನ್ನರು ಸೇರಿದಂತೆ ಹಲವರು ಸಾವಿಗೀಡಾದ 2008ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಎಂದು ಭಾವಿಸಿದ್ದೇವೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry