ಎರಡನೇ ಸ್ಥಾನಕ್ಕೆ ಮಾನವ್‌

7

ಎರಡನೇ ಸ್ಥಾನಕ್ಕೆ ಮಾನವ್‌

Published:
Updated:

ನವದೆಹಲಿ: ಭಾರತದ ಮಾನವ್‌ ಠಕ್ಕರ್‌ ಶುಕ್ರವಾರ ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌ (ಐಟಿಟಿಎಫ್‌) ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

18 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮಾನವ್‌ ಈ ಸಾಧನೆ ಮಾಡಿದ್ದಾರೆ. ಅವರು ಒಟ್ಟು 16 ಸ್ಥಾನಗಳಲ್ಲಿ ಪ್ರಗತಿ ಸಾಧಿಸಿದ್ದಾರೆ.  21 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ಮಾನವ್‌, ಅಗ್ರ 15ರಲ್ಲಿ ಸ್ಥಾನ ಗಳಿಸಿದ್ದಾರೆ. ಟಕ್ಕರ್‌, ಸ್ಲೊವೇನಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.

ಅರ್ಚನಾಗೆ 18ನೇ ಸ್ಥಾನ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿ ಅರ್ಚನಾ ಕಾಮತ್‌, 18 ವರ್ಷದೊಳಗಿನವರ ಸಿಂಗಲ್ಸ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಅವರು 34ನೇ ಸ್ಥಾನದಿಂದ 18ಕ್ಕೆ ಏರಿಕೆ ಕಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry