ಪುಣೆ ಸಿಟಿಗೆ ಜಯದ ಭರವಸೆ

7

ಪುಣೆ ಸಿಟಿಗೆ ಜಯದ ಭರವಸೆ

Published:
Updated:
ಪುಣೆ ಸಿಟಿಗೆ ಜಯದ ಭರವಸೆ

ಪುಣೆ: ಮೂರನೇ ಸ್ಥಾನದಲ್ಲಿ ಉಳಿದುಕೊಳ್ಳಲು ಕಸರತ್ತು ನಡೆಸಿರುವ ಎಫ್‌ಸಿ ಪುಣೆ ಸಿಟಿ ತಂಡ ಶನಿವಾರದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಪಂದ್ಯದಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ (ಎಟಿಕೆ) ತಂಡವನ್ನು ಎದುರಿಸಲಿದೆ.

ಟೂರ್ನಿಯ ಆರಂಭದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಎಟಿಕೆ  4–1 ಗೋಲುಗಳಿಂದ ಎಟಿಕೆಗೆ ಸೋಲುಣಿಸಿತ್ತು. ಈ ಪಂದ್ಯ ಕೋಲ್ಕತ್ತದಲ್ಲಿ ನಡೆದಿತ್ತು. ಈಗ ತವರಿನಲ್ಲಿ ನಡೆಯುವ ಪಂದ್ಯದಲ್ಲಿಯೂ ಪುಣೆ ತಂಡ ಇದೇ ವಿಶ್ವಾಸದೊಂದಿಗೆ ಆಡಲಿದೆ.

ಲೀಗ್‌ನ ಅಂತಿಮ ಹಂತದ ಪಂದ್ಯಗಳಲ್ಲಿ ಗೆಲ್ಲುವುದು ಉಭಯ ತಂಡಗಳಿಗೂ ಅನಿವಾರ್ಯವಾಗಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಮಾತ್ರ ಸೆಮಿಫೈನಲ್‌ ಹಂತಕ್ಕೆ ಕಾಲಿಡಲಿವೆ. ಬೆಂಗಳೂರು ಹಾಗೂ ಚೆನ್ನೈ ಎಫ್‌ಸಿ ತಂಡಗಳು ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry