ಕ್ಲೀನ್‌ಸ್ವೀಪ್‌ ಸಾಧಿಸಿದ ನ್ಯೂಜಿಲೆಂಡ್‌

7
ಮಾರ್ಟಿನ್ ಗಪ್ಟಿಲ್ ಶತಕ; ಪಾಕಿಸ್ತಾನಕ್ಕೆ ಸೋಲು

ಕ್ಲೀನ್‌ಸ್ವೀಪ್‌ ಸಾಧಿಸಿದ ನ್ಯೂಜಿಲೆಂಡ್‌

Published:
Updated:
ಕ್ಲೀನ್‌ಸ್ವೀಪ್‌ ಸಾಧಿಸಿದ ನ್ಯೂಜಿಲೆಂಡ್‌

ವೆಲ್ಲಿಂಗ್ಟನ್‌: ಪಾಕಿಸ್ತಾನ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡ 5–0ರಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.

ಮಾರ್ಟಿನ್ ಗಪ್ಟಿಲ್‌ ಶತಕದ ಬಲದಿಂದ ಆತಿಥೇಯ ತಂಡ ಶುಕ್ರವಾರದ ಅಂತಿಮ ಪಂದ್ಯದಲ್ಲಿ 15 ರನ್‌ಗಳಿಂದ ಗೆದ್ದಿದೆ.

ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 49 ಓವರ್‌ಗಳಲ್ಲಿ 256 ರನ್‌ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಆಘಾತ ನೀಡಿದರು. ಮೇಲಿನ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ನಾಲ್ಕನೇ ಕ್ರಮಾಂಕದ ಹ್ಯಾರಿಸ್‌ ಸೋಹೇಲ್‌ (63, 87ಎ, 5ಬೌಂ) ತಾಳ್ಮೆಯ ಇನಿಂಗ್ಸ್ ಕಟ್ಟಿದರು. ಶದಾಬ್‌ ಖಾನ್‌ (54, 77ಎ, 5ಬೌಂ) ಹಾಗೂ ಬೌಲರ್ ಆಮಿರ್ ಯಾಮಿನ್‌ (32, 27ಎ, 3ಬೌಂ, 1ಸಿ) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಕಿವೀಸ್ ಬೌಲರ್ ಮ್ಯಾಟ್ ಹೆನ್ರಿ (53ಕ್ಕೆ4) ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು.

ಗಪ್ಟಿಲ್ ಶತಕ: ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್‌ ಗಪ್ಟಿಲ್‌ (100, 126ಎ, 10ಬೌಂ, 1ಸಿ) ಉತ್ತಮ ಇನಿಂಗ್ಸ್ ಕಟ್ಟಿದರು. ರಾಸ್‌ ಟೇಲರ್‌ (59, 73ಎ, 3ಬೌಂ) ಅರ್ಧಶತಕ ದಾಖಲಿಸಿದರು. ಈ ಜೋಡಿ ಮೂರನೇ ವಿಕೆಟ್‌ನಲ್ಲಿ 112 ರನ್ ಪೇರಿಸಿತು.

ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 271 (ಮಾರ್ಟಿನ್ ಗಪ್ಟಿಲ್‌ 100, ಕೊಲಿನ್ ಮನ್ರೊ 34, ರಾಸ್ ಟೇಲರ್‌ 59; ರುಮ್ಮನ್‌ ರಾಯಿಸ್‌ 67ಕ್ಕೆ3).

ಪಾಕಿಸ್ತಾನ: 49 ಓವರ್‌ಗಳಲ್ಲಿ 256 (ಹ್ಯಾರಿಸ್‌ ಸೋಹೆಲ್‌ 63, ಶದಾಬ್ ಖಾನ್ 54, ಅಮಿರ್ ಯಾವಿನ್‌ 32; ಮ್ಯಾಟ್ ಹೆನ್ರಿ 53ಕ್ಕೆ4).

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 15 ರನ್‌ಗಳ ಜಯ. ಪಂದ್ಯ ಶ್ರೇಷ್ಠ: ಮಾರ್ಟಿನ್ ಗಪ್ಟಿಲ್‌. ಸರಣಿ ಶ್ರೇಷ್ಠ: ಮಾರ್ಟಿನ್ ಗಪ್ಟಿಲ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry