ಆಸ್ಟ್ರೇಲಿಯಾ ಓಪನ್ ಟೆನಿಸ್; ರಫೆಲ್‌ ನಡಾಲ್‌ಗೆ ಜಯ

7
ಪ್ರೀ ಕ್ವಾರ್ಟರ್‌ಗೆ ವೋಜ್ನಿಯಾಕಿ

ಆಸ್ಟ್ರೇಲಿಯಾ ಓಪನ್ ಟೆನಿಸ್; ರಫೆಲ್‌ ನಡಾಲ್‌ಗೆ ಜಯ

Published:
Updated:
ಆಸ್ಟ್ರೇಲಿಯಾ ಓಪನ್ ಟೆನಿಸ್; ರಫೆಲ್‌ ನಡಾಲ್‌ಗೆ ಜಯ

ಮೆಲ್ಬರ್ನ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಕರೊಲಿನಾ ವೋಜ್ನಿಯಾಕಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ವೋಜ್ನಿಯಾಕಿ 6–4, 6–3ರಲ್ಲಿ ನೆದರ್ಲೆಂಡ್ಸ್‌ನ ಕಿಕಿ ಬೆರ್ಟನ್ಸ್ ಮೇಲೆ ಗೆದ್ದಿದ್ದಾರೆ. ಒಂದು ಗಂಟೆ 26 ನಿಮಿಷದ ಹೋರಾಟದಲ್ಲಿ ಡೆನ್ಮಾರ್ಕ್‌ನ ಆಟಗಾರ್ತಿ ಮೇಲುಗೈ ಸಾಧಿಸಿದರು.

ಬೆರ್ಟನ್ಸ್ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಮೂರನೇ ಸುತ್ತಿನ ಪಂದ್ಯ ಆಡಿದ್ದರು. ಇಲ್ಲಿ 30ನೇ ಶ್ರೇಯಾಂಕ ಪಡೆದುಕೊಂಡಿದ್ದ ಅವರು ಮೊದಲ ಸೆಟ್‌ನಲ್ಲಿ ಪರಿಣಾಮಕಾರಿಯಾಗಿ ಆಡಿದರು.

ಕೆರ್ಬರ್‌–ಶರಪೋವಾ ಮುಖಾಮುಖಿ: ಎರಡು ಬಾರಿ ಇಲ್ಲಿ ಪ್ರಶಸ್ತಿ ಗೆದ್ದಿರುವ ರಷ್ಯಾದ ಮರಿಯಾ ಶರಪೋವಾ ಹಾಗೂ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಮೂರನೇ ಸುತ್ತಿನ ಪಂದ್ಯದಲ್ಲಿ ಶನಿವಾರ ಮುಖಾಮುಖಿಯಾಗಲಿದ್ದಾರೆ.

ನಡಾಲ್‌ಗೆ ಜಯ: ರಫೆಲ್‌ ನಡಾಲ್‌ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 6–1, 6–3, 6–1ರಲ್ಲಿ 28ನೇ ಶ್ರೇಯಾಂಕದ ದಮಿರ್ ಜುಮಹುರ್ ಎದುರು ಗೆದ್ದು ಪ್ರೀ ಕ್ವಾರ್ಟರ್ ತಲುಪಿದ್ದಾರೆ.

17 ಶ್ರೇಯಾಂಕದ ನಿಕ್ ಕಿರ್ಗೊಸ್‌ 7–6, 4–6, 7–6ರಲ್ಲಿ ಜೊ ವಿಲ್ಫ್ರೆಡ್ ಸೊಂಗ್ ಅವರನ್ನು ಮಣಿಸಿದರು.

ಮುಂದಿನ ಪಂದ್ಯದಲ್ಲಿ ಗ್ರಿಗೊರ್ ದಿಮಿತ್ರೊವ್ ವಿರುದ್ಧ ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry