ಕೋಳಿಗಳ ರಕ್ತ ಹೀರಿ ಸಾಯಿಸಿದ ಅಪರಿಚಿತ ಪ್ರಾಣಿ

7

ಕೋಳಿಗಳ ರಕ್ತ ಹೀರಿ ಸಾಯಿಸಿದ ಅಪರಿಚಿತ ಪ್ರಾಣಿ

Published:
Updated:
ಕೋಳಿಗಳ ರಕ್ತ ಹೀರಿ ಸಾಯಿಸಿದ ಅಪರಿಚಿತ ಪ್ರಾಣಿ

ಹೊಸಪೇಟೆ: ಇಲ್ಲಿನ ಹೊರವಲಯದ ಮಡ್ಡೇರ್ ಓಣಿಯಲ್ಲಿ ಶುಕ್ರವಾರ ತಡರಾತ್ರಿ ಅಪರಿಚಿತ ಪ್ರಾಣಿಯೊಂದು ದಾಳಿ ನಡೆಸಿದ್ದರಿಂದ ರಸ್ತೆಯುದ್ದಕ್ಕೂ ಕೋಳಿಗಳು ಸತ್ತು ಬಿದ್ದಿವೆ.

ಕೋಳಿಗಳ ರಕ್ತ ಹೀರಿ ಸಾಯಿಸಲಾಗಿದೆ. ಅಷ್ಟೇ ಅಲ್ಲ, ಅವುಗಳ ಮೊಟ್ಟೆಗಳನ್ನು ತಿಂದು ಹಾಕಲಾಗಿದೆ. ಈ ಓಣಿಯಲ್ಲಿನ ಬಹುತೇಕ ಜನ ಕೋಳಿ ಸಾಕಿದ್ದಾರೆ. ಅವುಗಳಲ್ಲಿ ಬಹುತೇಕರ ಕೋಳಿಗಳು ಮನೆ ಎದುರು ಸತ್ತು ಬಿದ್ದಿವೆ.

ಸ್ಥಳೀಯ ಮಹಿಳೆಯೊಬ್ಬರ ಪ್ರಕಾರ ಕಪ್ಪು ವರ್ಣದ ಪ್ರಾಣಿಯೊಂದು ಈ ದಾಳಿ ನಡೆಸಿದೆ.

ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry