ತೊಗರಿ ಖರೀದಿ ಕೇಂದ್ರ ಆರಂಭ

7

ತೊಗರಿ ಖರೀದಿ ಕೇಂದ್ರ ಆರಂಭ

Published:
Updated:

ಮಸ್ಕಿ: ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ಸರ್ಕಾರ ಖರೀದಿಗೆ ಮುಂದಾಗಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳೀದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಗಣದಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಬ್ಯಾಂಕ್ ಆರಂಭಿಸಿರುವ ತೊಗರಿ ಬೆಳೆ ಖರೀದಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿ ಕ್ವಿಂಟಲ್ ತೊಗರಿಗೆ ಸರ್ಕಾರ ₹ 6 ಸಾವಿರ ನಿಗದಿ ಮಾಡಿದೆ. ಇದರಿಂದ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಿದಂತಾಗಿದೆ. ತೊಗರಿ ಬೆಳೆಗಾರರು ಆತಂಕ ಪಡದೆ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳ ಮೂಲಕ ಮಾರಾಟ ಮಾಡಬಹುದು’ ಎಂದರು.

ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷೆ ಪೂರ್ಣಿಮಾ ವಿ. ಪಾಟೀಲ, ಎಪಿಎಂಸಿ ಉಪಾಧ್ಯಕ್ಷ ಬಸ್ಸಪ್ಪ ಬ್ಯಾಳಿ, ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ಜಿ. ನಾಯಕ, ಉಮಕಾಂತಪ್ಪ ಸಂಗನಾಳ, ಡಾ. ಬಿ.ಎಚ್. ದಿವಟರ್, ಕಾಂಗ್ರೆಸ್ನ ಮಸ್ಕಿ ಘಟಕದ ಅಧ್ಯಕ್ಷ ಮಲ್ಲಣ್ಣ ಬ್ಯಾಳಿ, ದೊಡ್ಡಪ್ಪ ಕಡಬೂರು, ಬಸನಗೌಡ ಪೊಲೀಸ್ ಪಾಟೀಲ, ಅಮರೇಶ ಯಂಬಲದ, ವೀರೇಶ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry