ಉದ್ಯೋಗ ದೊರೆಯದವರ ಜತೆ ನಾವಿದ್ದೇವೆ: ಅನಂತಕುಮಾರ ಹೆಗಡೆ

7

ಉದ್ಯೋಗ ದೊರೆಯದವರ ಜತೆ ನಾವಿದ್ದೇವೆ: ಅನಂತಕುಮಾರ ಹೆಗಡೆ

Published:
Updated:
ಉದ್ಯೋಗ ದೊರೆಯದವರ ಜತೆ ನಾವಿದ್ದೇವೆ: ಅನಂತಕುಮಾರ ಹೆಗಡೆ

ಬಳ್ಳಾರಿ: ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಇಲ್ಲಿ ಏರ್ಪಡಿಸಿರುವ ಉದ್ಯೋಗ ಮೇಳಕ್ಕೆ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಉದ್ಯೋಗ ಸಿಗದವರ ಜತೆ ನಾವಿರುತ್ತೇವೆ. ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಕೌಶಲ ತರಬೇತಿ ನೀಡುತ್ತಿದೆ. ಪದವಿ ಪ್ರಮಾಣ ಪತ್ರಗಳಿಂದ ಬದುಕು ಕಟ್ಟಲು ಸಾಧ್ಯವಿಲ್ಲ. ನಮ್ಮೊಳಗಿನ ತುಡಿತ ಉತ್ತಮ ಜೀವನಕ್ಕೆ ಅನುವು ಮಾಡಿಕೊಡುತ್ತದೆ’ ಎಂದು ಹೇಳಿದರು.

‘ಯುವಜನರು ತಮ್ಮ ತುಡಿತಕ್ಕೆ ತಕ್ಕಂತೆ ಶಿಕ್ಷಣ ಮತ್ತು ಉದ್ಯೋಗ ಪಡೆಯುವಂತಾಗಬೇಕು. ಮೇಳಕ್ಕೆ 70 ಕಂಪೆನಿಗಳು ಬಂದಿದ್ದು, ಉದ್ಯೋಗ ನೀಡಲು ಸಿದ್ಧವಿವೆ. 9 ಸಾವಿರ ಯುವಜನ ಉದ್ಯೋಗ ಅರಸಿ ಬಂದಿದ್ದಾರೆ. ಈ ಪೈಕಿ ಎರಡು ಸಾವಿರ ಜನರಿಗೆ ಉದ್ಯೋಗ ಸಿಗಬಹುದು. ಉಳಿದವರಿಗೆ ನಾವು ಕೌಶಲ ಕಲಿಸಿ ಕೊಡುತ್ತೇವೆ’ ಎಂದು ಅವರು ಹೇಳಿದರು.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಪ್ರಧಾನಮಂತ್ರಿ ಉದ್ಯೋಗ ಕೌಶಲ ಕೇಂದ್ರ ಆರಂಭಿಸುತ್ತೇವೆ ಎಂಬುದಾಗಿಯೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry