ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳ ಮೂಲಕ ಮಕ್ಕಳಿಗೆ ಸಂಚಾರ ಪಾಠ

Last Updated 20 ಜನವರಿ 2018, 8:59 IST
ಅಕ್ಷರ ಗಾತ್ರ

ಯಳಂದೂರು: ರಸ್ತೆ ಬದಿಯ ಸಿಗ್ನಲ್‌ನಲ್ಲಿ ಹಸಿರು, ಕೆಂಪು ಹಾಗೂ ಹಳದಿ ಬಣ್ಣಗಳ ಚಿಹ್ನೆಗಳನ್ನು ಏಕೆ ಪ್ರದರ್ಶಿಸಲಾಗುತ್ತದೆ? ರಾಷ್ಟ್ರೀಯ ಹಬ್ಬಗಳ ಮಹತ್ವ ತಿಳಿಯುವುದು ಹೇಗೆ?, ಸರಳ ಗಣಿತದ ಸೂತ್ರಗಳನ್ನು ಹೇಗೆ ರಚಿಸಬಹುದು? ಹೀಗೆ ವಿವಿಧ ವಿಷಯಗಳನ್ನು ಸೃಜನಶೀಲವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದರು.

ತಾಲ್ಲೂಕಿನ ದಾಸನಹುಂಡಿ ಸರ್ಕಾರಿ ಶಾಲೆಯಲ್ಲಿ ಇಂಥ ಹತ್ತಾರು ಪರಿಕಲ್ಪನೆಗಳನ್ನು ಮಕ್ಕಳಿಗೆ ಸರಳವಾಗಿ ಕಲಿಸಲಾಗುತ್ತದೆ. ನಲಿಕಲಿ ತರಗತಿಯಲ್ಲಿ ಬೋಧನ ಪರಿಕರಗಳ ಮೂಲಕ ಕ್ಯಾನ್ವಾಸ್‌ ಹಾಳೆಯಲ್ಲಿ ಚಿತ್ರ ರಚಿಸಲಾಗುತ್ತದೆ. ಅಡಿ ಬರಹಗಳಲ್ಲಿ ವಿಜ್ಞಾನ, ಪರಿಸರ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ವಿವರಣೆ ಇರುತ್ತವೆ.

‘ಬಿಆರ್‌ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಬೊಂಬೆ ಪ್ರದರ್ಶನದ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಷಯವಾರು ಚಿತ್ರ ಮತ್ತು ಬೊಂಬೆ ಪ್ರದರ್ಶನದ ಬಗ್ಗೆ ತಿಳಿಸಲಾಗುತ್ತದೆ. ನಂತರ ಬೋಧಕರು ತಮ್ಮ ಅನುಭವದ ಮೂಲಕ ಮಕ್ಕಳ ಕಲಿಕೆಗೆ ಪೂರಕವಾಗಿ ಹತ್ತಾರು ವಿಷಯಗಳ ಬಗ್ಗೆ ಚಿತ್ರಕಲೆ, ಮುಖವಾಡ, ಗಣಿತ ಸೂತ್ರಗಳನ್ನು ವೈವಿಧ್ಯಮಯವಾಗಿ ರಚಿಸಬಹುದು’ ಎನ್ನುತ್ತಾರೆ ಶಿಕ್ಷಕಿ ಎಲ್. ಸುಜಾತ.

ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಮಾತನಾಡಿ, ‘ಮಕ್ಕಳಿಗೆ ಬಣ್ಣದ ಅಕ್ಷರ ಮತ್ತು ಆಕೃತಿಗಳನ್ನು ನೀಡಿ ಗ್ರಾಮೀಣ ಜನರಿಗೂ ರಸ್ತೆ ಸುರಕ್ಷಾ ಸಪ್ತಾಹದ ಬಗ್ಗೆ ತಿಳಿವಳಿಕೆ ನೀಡಬಹುದು. ವಿಶೇಷ ದಿನಾಚರಣೆಗಳ ಭಾಗವಾಗಿ ಪರಿಕರಗಳನ್ನು ವಿನ್ಯಾಸಗೊಳಿಸಬಹುದು. ಇದರಿಂದ ಮಕ್ಕಳಲ್ಲಿ ವಿಷಯ ಗ್ರಹಿಕೆ, ಆಲೋಚನಾ ವಿಧಾನ ಮತ್ತು ಕರಕುಶಲ ವಸ್ತುಗಳ ಜ್ಞಾನವೂ ಸಿದ್ಧಿಸುತ್ತದೆ’ ಎನ್ನುತ್ತಾರೆ.

‘ತರಗತಿ ಗೋಡೆಗಳ ನಡುವೆ ಮಕ್ಕಳು ಕಳೆದುಹೋಗದೆ ಪಠ್ಯದಲ್ಲಿರುವ ಹೊಸ ವಿಚಾರ ವಿನಿಮಯ ನಡೆಸುವುದು. ಕಲಿಕೆಯಲ್ಲಿ ನೂತನ ವಿಧಾನ ಪರಿಚಯಿಸುವ ಭಾಗವಾಗಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಇದರಿಂದ ಸಾಧ್ಯವಾಗಿದೆ’ ಎಂಬುದು ಸಿಆರ್‌ಪಿ ನಿಂಗರಾಜು ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT