ಪಾಲ್ಯೇಕರ್ ವಿರುದ್ಧ ಮುಂಡರಗಿಯಲ್ಲಿ ಆಕ್ರೋಶ

7

ಪಾಲ್ಯೇಕರ್ ವಿರುದ್ಧ ಮುಂಡರಗಿಯಲ್ಲಿ ಆಕ್ರೋಶ

Published:
Updated:

ಮುಂಡರಗಿ: ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್ ಅವರು ಕನ್ನಡಿಗರ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಜಾಗೃತ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಕೊಪ್ಪಳ ವೃತ್ತದಲ್ಲಿ ಸೇರಿ ಅಲ್ಲಿ ವಿನೋದ ಪಾಲ್ಯೇಕರ್ ಅವರ ಪ್ರತಿಕೃತಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ ಹಿರೇಮನಿ ಮಾತನಾಡಿ, ‘ಗೋವಾ ಸಚಿವ ವಿನೋದ ಪಾಲ್ಯೇಕರ್ ಅವರು ತುಂಬಾ ಹಗುರವಾಗಿ ಮಾತನಾಡುತ್ತಿದ್ದಾರೆ. ಇದೇ ಪ್ರವೃತ್ತಿ ಮುಂದುವರಿದರೆ ಕನ್ನಡಿಗರು ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಯುವ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿ, ‘ಮಹದಾಯಿ ನದಿ ನೀರು ಹಂಚಿಕೆ ಸೇರಿದಂತೆ ಗೋವಾ ಸರ್ಕಾರ ಕನ್ನಡಿಗರಿಗೆ ಸದಾ ಅನ್ಯಾಯ ಎಸಗುತ್ತಿದೆ. ಕನ್ನಡಿಗರು ಸದಾ ಶಾಂತಿಪ್ರಿಯರಾಗಿದ್ದು, ಕನ್ನಡದ ನೆಲ, ಜಲ, ಭಾಷಾ ವಿಷಯ ಬಂದಾಗ ಕನ್ನಡಿಗರೆಲ್ಲ ಒಂದಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಗಡಾದ ಮಾತನಾಡಿ ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಸಲ್ಲಿಸಿದ ಮನವಿಯನ್ನು ಉಪ ತಹಶೀಲ್ದಾರ್ ಕೆ.ಬಿ.ಕೋರಿಶೆಟ್ಟರ್ ಸ್ವೀಕರಿಸಿದರು. ಪವನ ಮೇಟಿ, ಸುನೀಲ ಉಳ್ಳಾಗಡ್ಡಿ, ಶಿವರಾಜ ಅಗಸಿಮುಂದಿನ, ಮೌನೇಶ ಬಡಿಗೇರ, ಕೊಟೇಪ್ಪ ಗುಡಿ, ರಮೇಶ ರಾಟಿ, ಬಸವರಾಜ ಗಾರವಾಡ, ಪ್ರವೀಣ ವಡ್ಡಟ್ಟಿ, ಮಹೇಶ ಕರ್ನೇಲ್, ಪ್ರಕಾಶ ಹಲವಾಗಲಿ, ಭರಮಪ್ಪ ನೀರಲಗಿ, ಮುದಿಯಪ್ಪ ಚಿಕ್ಕಣ್ಣವರ, ಕಳಪ್ಪ ಜಾಲಿಹಾಳ, ಬಾಳಪ್ಪ ಮುಂದಿನಮನಿ, ಶ್ರೀನಿವಾಸ ಹಾದಿಮನಿ, ಅಭಿ ಹಾಲಿನವರ, ರಾಘವೇಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry