ಉತ್ತರ ಭಾರತ ಯುವಕರಿಗೆ ಥಳಿತ

7

ಉತ್ತರ ಭಾರತ ಯುವಕರಿಗೆ ಥಳಿತ

Published:
Updated:

ಹಾಸನ: ನಗರದ ಎನ್.ಆರ್‌.ವೃತ್ತದಲ್ಲಿ ಗುರುವಾರ ರಾತ್ರಿ ಆಟೊದಲ್ಲಿ ಸಹ ಪ್ರಯಾಣಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಪಾನಮತ್ತ ಉತ್ತರ ಭಾರತದ ಯುವಕರಿಗೆ ಸಾರ್ವಜನಿಕರು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಎನ್‌.ಆರ್‌.ವೃತ್ತದಿಂದ ಹೊಸಕೊಪ್ಪಲು ಕಡೆಗೆ ಹೋಗುತ್ತಿದ್ದ ಆಟೊದಲ್ಲಿ ಯುವತಿ ಪ್ರಯಾಣಿಸುತ್ತಿದ್ದರು. ಆಕೆ ಪಕ್ಕ ಕುಳಿತ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಯುವತಿ ಆಟೊದಿಂದ ಕೆಳಗಿಳಿದು ಸ್ಥಳದಲ್ಲಿದ್ದವರ ಗಮನ ಸೆಳೆದಳು.

ತಕ್ಷಣ ಗುಂಪು ಸೇರಿದ ಸಾರ್ವಜನಿಕರು ಯುವಕರಿಬ್ಬರನ್ನು ಆಟೊದಿಂದ ಹೊರಗೆಳೆದು ಅರೆನಗ್ನಗೊಳಿಸಿ ಥಳಿಸಿದರು. ಸ್ಥಳಕ್ಕೆ ಬಂದ ಬಡಾವಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry